ಮಕ್ಕಳ ಪ್ರಗತಿಗೆ ಮೊಬೈಲ್ ಗೀಳು ಮಾರಕ

Mobile addiction is detrimental to children's progress
ಚಿಮ್ಮಡ ಗ್ರಾಮದ ಪಿಪಿಎಂಎಂ ಶಾಲೆಯಲ್ಲಿ ಆಯೋಜಿಸಿದ್ದ ಚಿಣ್ಣರೋತ್ಸವ ಕಾರ್ಯಕ್ರಮದಲ್ಲಿ ಸಿಆರ್‌ಪಿ ದಾಕ್ಷಾಯಿಣಿ ಮಂಡಿ ಮಾತನಾಡಿದರು. ಆರ್.ವೈ. ಮುಗಳಖೋಡ, ಬಂಗಾರೆವ್ವ ಜಾಲಿಕಟ್ಟಿ, ಪದ್ಮಾವತಿ ಭಜಂತ್ರಿ, ಪುಂಡಲಿಕಪ್ಪ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ಬಳಗಾರ, ರಾಚಯ್ಯ ಮಠಪತಿ, ಈಶ್ವರ ಬಡಿಗೇರ ಮತ್ತಿತರರಿದ್ದರು.
Published on

ಚಿಮ್ಮಡ: ಮಕ್ಕಳ ಪ್ರಗತಿಗೆ ಮೊಬೈಲ್ ಗೀಳು ಮಾರಕವಾಗಿದ್ದು, ಈ ಕುರಿತು ಪಾಲಕರು ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಸಿಆರ್‌ಪಿ ದಾಕ್ಷಾಯಿಣಿ ಮಂಡಿ ಹೇಳಿದರು.

ಗ್ರಾಮದ ಹುಡೇದ ಲಕ್ಕವ್ವ ಎಜುಕೇಷನ್ ಸಂಸ್ಥೆಯ ಅನುದಾನಿತ ಪಿಪಿಎಂಎಂ ಶಾಲೆಯಲ್ಲಿ ಆಯೋಜಿಸಿದ್ದ ಚಿಣ್ಣರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬೋಧನೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಶಿಕ್ಷಕರು ಮಾತೃಸ್ವರೂಪಿಗಳಾಗಿದ್ದಾರೆ ಎಂದರು.

ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪಾಲಕರು ಥಳಕು ಬಳುಕಿನ ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತಿದ್ದು, ಮಕ್ಕಳ ಪ್ರಗತಿಯತ್ತ ಗಮನ ಹರಿಸುತಿಲ್ಲ ಎಂದರು.

ಪತ್ರಕರ್ತ ಮಹೇಶ ಮನ್ನಯನವರಮಠ, ಗ್ರಾಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ಮಾತನಾಡಿದರು. ಮುಖ್ಯಶಿಕ್ಷಕಿ ಎಸ್.ಡಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ವೈ. ಮುಗಳಖೋಡ ಅಧ್ಯಕ್ಷತೆ ವಹಿಸಿದ್ದರು.

ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸತ್ಕರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ, ಉಪಾಧ್ಯಕ್ಷೆ ಪದ್ಮಾವತಿ ಭಜಂತ್ರಿ, ಪುಂಡಲಿಕಪ್ಪ ಪೂಜಾರಿ, ರಾಮಣ್ಣ ಬಗನಾಳ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ಬಳಗಾರ, ರಾಚಯ್ಯ ಮಠಪತಿ, ಈಶ್ವರ ಬಡಿಗೇರ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಇಲಾಹಿ ಜಮಖಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net