6G ತಂತ್ರಜ್ಞಾನದಲ್ಲಿ ಭಾರತವೇ ಮುಂಚೂಣಿ; ಕೇಂದ್ರ ಸಚಿವ ಸಿಂಧಿಯಾ ವಿಶ್ವಾಸ

IMG-20250710-WA0045.jpg
Published on

ಬೆಳಗಾವಿ:ಭಾರತದ ಕೇಂದ್ರ ಸರ್ಕಾರ 6G ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು "ಡಿಜಿಟಲ್ ಹೆದ್ದಾರಿ" ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು.

ಬೆಂಗಳೂರುನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಪ್ರಾದೇಶಿಕ ಕಚೇರಿಯಲ್ಲಿ ನಡೆದ VTU - VRIF - TCOE ನ ಉತ್ಕೃಷ್ಟ ಮತ್ತು ಭವಿಷ್ಯದ ತಂತ್ರಜ್ಞಾನಗಳ Centre of Excellence (CoE) ಉದ್ಘಾಟನಾ ಸಮಾರಂಭದಲ್ಲಿ ಅವರು‌ ಮಾತನಾಡಿದರು.

ಪ್ರತಿ ವ್ಯಕ್ತಿಯ ವೃತ್ತಿಜೀವನ ರೂಪಿಸುವಲ್ಲಿ ‘ಗುರು’ಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿ ಸರ್ ಎಂ ವಿಶ್ವೇಶ್ವರಯ್ಯ ಅವರು ಒಬ್ಬ ಶ್ರೇಷ್ಠ ತಂತ್ರಜ್ಞ ಜೊತೆಗೆ ಗುರು ಆಗಿದ್ದರು ಎಂದು ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಲಾದ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (TCOE) ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ದೂರಸಂಪರ್ಕ ತಜ್ಞರನ್ನ ಉದ್ದೇಶಿಸಿ ಮಾತನಾಡಿದರು. ಈ ಕೇಂದ್ರವು ದೂರಸಂಪರ್ಕ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮ-ಶೈಕ್ಷಣಿಕ ಸಹಯೋಗಕ್ಕೆ ಮಾರ್ಗದರ್ಶನ ನೀಡುವ ದೃಷ್ಟಿಕೋನದ ಯೋಜನೆಯಾಗಿದೆ.

**1. ಮುಂದಿನ ತಂತ್ರಜ್ಞಾನಗಳ ಮಹತ್ವ:** 5G/6G, ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮುಂತಾದ ಮುಂದಿನ ತಂತ್ರಜ್ಞಾನಗಳು ಭಾರತದ ಭವಿಷ್ಯವನ್ನು ರೂಪಿಸುತ್ತವೆ ಎಂಬುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ VTU ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ರಾಷ್ಟ್ರದ ಡಿಜಿಟಲ್ ಗುರಿಗಳೊಂದಿಗೆ ಜೋಡಿಸಿರುವುದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು.

**2. ಆತ್ಮನಿರ್ಭರ ಭಾರತಕ್ಕೆ ಬದ್ಧತೆ:**

“VTUಯಲ್ಲಿ TCOE ಸ್ಥಾಪನೆಯು ದೇಶೀಯ ನಾವೀನ್ಯತೆಯ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣದತ್ತ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೇಂದ್ರವು ಭವಿಷ್ಯದ ದೂರಸಂಪರ್ಕ ನಾಯಕರಿಗೆ ತಂತ್ರಜ್ಞಾನದ ಜ್ಞಾನ ನೀಡುವ ತಂತ್ರಜ್ಞಾನದ ದೇವಾಲಯವಿದ್ದಂತೆ ಇದು ಜಾಗತಿಕ ಡಿಜಿಟಲ್ ಪರಿವರ್ತನೆಯಲ್ಲಿಯೂ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ,” ಎಂದು ಶ್ರೀ ಸಿಂಧಿಯಾ ಹೇಳಿದರು.

**3. ಸಂಶೋಧನೆ ಮತ್ತು ಉದ್ಯಮ ಜೋಡಣೆ:** TCOE ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ದೂರಸಂಪರ್ಕ ಉದ್ಯಮದ ನಡುವೆ ಸೇತುವೆ ರಚಿಸುವ ಮೂಲಕ ಈ ಅವಶ್ಯಕ ಸಮಯದಲ್ಲಿ ಸಹಯೋಗಕ್ಕಾಗಿ ಇದು ವೇದಿಕೆಯಾಗಲಿದೆ ಎಂದು ಹೇಳಿದರು.

**4. ಡಿಜಿಟಲ್ ಸಬಲೀಕರಣ:** ದೇಶದಲ್ಲಿ 900 ಮಿಲಿಯನ್ ಮೊಬೈಲ್ ಸಂಪರ್ಕಗಳಿರುವ ಡಿಜಿಟಲ್ ಕ್ರಾಂತಿಯ ಕುರಿತು ಅವರು ವಿವರಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮವಾಯಿತ 4G/5G ಪ್ರವೇಶಕ್ಕೆ ಸರ್ಕಾರದ ಬದ್ಧತೆಯನ್ನು ಹಂಚಿಕೊಂಡರು.

**5. ಕೌಶಲ್ಯಾಭಿವೃದ್ಧಿ:** ಇಂಜಿನಿಯರಿಂಗ್ ಪದವಿದರರನ್ನು ಹೊಸ ಡಿಜಿಟಲ್ ಆರ್ಥಿಕತೆಗೆ ಸಿದ್ಧಪಡಿಸಲು idu ಸಹಾಯಕಾರಿಯಾಗಲಿದೆ ಮತ್ತೆ ಆ ನಿಟ್ಟಿನಲ್ಲಿ ಈ ಕೇಂದ್ರ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಶೈಕ್ಷಣಿಕ ಪಠ್ಯಕ್ರಮಗಳಲ್ಲಿ AI, ಮೆಷಿನ್ ಲರ್ನಿಂಗ್ ಮತ್ತು ನೆಟ್‌ವರ್ಕ್ ಭದ್ರತೆ ಸೇರಿಸಬೇಕು ಎಂದು ಸಲಹೆ ನೀಡಿದರು.

**6. ಸ್ಟಾರ್ಟ್‌ಅಪ್ ಬೆಂಬಲ:** TCOE ದೂರಸಂಪರ್ಕ ಆಧಾರಿತ ಸ್ಟಾರ್ಟ್‌ಅಪ್‌ಗಳಿಗೆ ಮೂಲಸೌಕರ್ಯ, ಮಾರ್ಗದರ್ಶನ ಹಾಗೂ ಸಂಶೋಧನಾ ನಿಧಿ ಒದಗಿಸುವ ಯೋಜನೆಯಿಂದ ಇದು ಕೂಡಿದೆ ಎಂದು ಹೇಳಿದರು.

**7. ಸಾರ್ವಜನಿಕ-ಖಾಸಗಿ ಪಾಲುದಾರಿ (PPP):** ಪ್ರತಿಯೊಬ್ಬ ನಾಗರಿಕನಿಗೆ ಕೈಗೆಟಕುವ ಹಾಗೂ ಸುಲಭವಾಗಿ ದೊರೆಯುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಮಾದರಿಯಲ್ಲಿ ಸಂಶೋಧನಾ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾದ ಡಾ ಶರಣ ಪ್ರಕಾಶ ಪಾಟೀಲ ಮಾತನಾಡಿ ಇವತ್ತಿನ ವಿದ್ಯಾರ್ಥಿಗಳಿಗೆ ಇಂತಹ ಕೇಂದ್ರಗಳು ಅವಶ್ಯಕವಾಗಿದೆ ಎಂದು ಹೇಳಿದರು.

ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದ VTU ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅವರು ಕೇಂದ್ರ ಸಚಿವರ ದೃಷ್ಟಿಕೋನಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು TCOE ಶೀಘ್ರದಲ್ಲೇ ರಾಷ್ಟ್ರಮಟ್ಟದ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಉದ್ಯಮ ಸಹಯೋಗದ ಮಾದರಿಯಾಗಿ ಪರಿವರ್ತನೆಯಾಗಲಿದೆ ಎಂದು ಹೇಳಿದರು ಇದಕ್ಕೆ ವಿ ಟಿ ಯು ಈ ಮೂಲಕ ಮುಂದಾಳತ್ವವನ್ನು ವಹಿಸಿಕೊಂಡಿದೆ ಎಂದು ಹೇಳಿದರು.

ವಿ ಟಿ ಯು ಕುಲಸಚಿವಪ್ರೊ ಬಿ ಈ ರಂಗಸ್ವಾಮಿ, ವಿ ಟಿ ಯು ಕಾರ್ಯಕಾರಿ ಪರಿಷತ್ ಮತ್ತು ವಿದ್ಯಾ ವಿಧಾನ ಮಂಡಲ ಸದಸ್ಯರು, ವಿ ಟಿ ಯು ಅಧೀನ ಕಾಲೇಜ್ ಗಳ ಸಂಸ್ಥೆಯ ಮುಖ್ಯಸ್ಥರು, ಪ್ರಾಂಶುಪಾಲರು, ದೂರಸಂಪರ್ಕ ಇಲಾಖೆ (DoT)ಯ ಹಿರಿಯ ಅಧಿಕಾರಿಗಳು, ವಿ ಟಿ ಯು ಅಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net