ಶೀಘ್ರ ಯರಗಟ್ಟಿ ಪಟ್ಟಣದಲ್ಲಿ ಬಸ್ ಡಿಪೋ ಘಟಕ ಆರಂಭ; ಸಚಿವ ರಾಮಲಿಂಗಾರೆಡ್ಡಿ ಭರವಸೆ

IMG-20250227-WA0003.jpg
Published on

ಬೆಳಗಾವಿ : ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹಾಗೂ ಬಸ್ ನಿಲ್ದಾಣದ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಯರಗಟ್ಟಿ ಪಟ್ಟಣದಲ್ಲಿ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲೇ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಭರವಸೆ ನೀಡಿದರು.

ನೂತನ ಯರಗಟ್ಟಿ ತಾಲೂಕಿಗೆ ಬಸ್ ಡಿಪೋ ಹಾಗೂ ಇನ್ನಿತರ ಕಛೇರಿಗಳು ಪ್ರಾರಂಭಸಲು ಮುಖ್ಯ ಮಂತ್ರಿಗಳೂಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜೇಂದ್ರಗೌಡ ಪಾಟೀಲ, ವಿಶಾಲಗೌಡ ಪಾಟೀಲ, ರಾಮೇಶಗೌಡ ಪಾಟೀಲ, ಎಚ್. ಕೆ. ಮಿಕಲಿ, ಸಿದ್ದು ದೇವರಡ್ಡಿ, ರಾಘವೇಂದ್ರ ದೇವರಡ್ಡಿ, ವೆಂಕಟೇಶ ದೇವರಡ್ಡಿ, ಮುತ್ತು ದೇವರಡ್ಡಿ ಸೇರಿದಂತೆ ಅನೇಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net