

-ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ.ಮನಮಹೋನ ಸಿಂಗ್ ಹೆಸರಿನಲ್ಲಿ ಆರ್ಥಿಕ ಸಂಶೋಧನಾ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಸಿಪಿಎಡ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಮನಮೋಹನ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಮೋಹನ ಸಿಂಗ್ ಅವರು ಆರ್ಥಿಕ ಕ್ಷೇತ್ರಕ್ಕೆನೀಡಿರುವ ಕೂಡುಗೆ ಅಪಾರ. ಅವರ ಶಾಸನಬದ್ಧ ಕಾರ್ಯಕ್ರಮಗಳ ಕುರಿತು ಅವರ ಹೆಸರಿನಲ್ಲಿ ಬೆಂಗಳೂರು ವಿವಿಯಲ್ಲಿ ಆರ್ಥಿಕ ಸಂಶೋಧನಾ ಕೇಂದ್ರ ಆರಂಭಿಸಲು ಉನ್ನತ ಶಿಕ್ಷಣ ಸಚಿವರು ಕ್ರಮ ವಹಿಸಬೇಕು ಎಂದರು.
ಮನಮೋಹನಸಿಂಗ್ ಅವರು ಶಾಸನಬದ್ಧ ಕಾರ್ಯಕ್ರಮ ನೀಡಿದ್ದಾರೆ. ಪುಟಾಣಿ ಮಕ್ಕಳ ಶಿಕ್ಷಣ, ಆಶಾ ಕಾರ್ಯಕರ್ತೆಯರ ಮೂಲಕ ಆರೋಗ್ಯಕ್ಕೆ, ಜಮೀನು ಕಳೆದುಕೊಳ್ಳುವವರಿಗೆ ನರದಲ್ಲಿ ಎರಡು ಪಟ್ಟು, ಹಳ್ಳಿಗಳಲ್ಲಿ ನಾಲ್ಕು ಪಟ್ಟು ಪರಿಹಾರ ಕೊಡುವ ನಿಯಮ ತಂದರು.ಫಾರೆಸ್ಟ್ ಆ್ಯಕ್ಟ್ ತಂದು ಅವರು ಅರಣ್ತವಾಸಿಗಳ ಬದುಕಿಗೂ ಹಕ್ಕು ನೀಡಿದರು ಎಂದು ನೆನಪಿಸಿಕೊಂಡರು.