ಯರಗಟ್ಟಿ ಪಟ್ಟಣದಲ್ಲಿ ಸಂಚಾರ ದಟ್ಟಣೆಗೆ ತತ್ತರಿಸಿದ ಜನ

IMG-20240914-WA0004.jpg
Published on

ಬೆಳಗಾವಿ: ಪಟ್ಟಣದಲ್ಲಿ ಜನಸಂಖ್ಯೆ ಜತೆಗೆ ವಾಹನ ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. ಆದರೆ, ಸಮಸ್ಯೆಗೆ ಶಾಶ್ವತವಾಗಿ ‌ಪರಿಹಾರ ಕಲ್ಪಿಸುವ ಕೆಲಸ ಆಗುತ್ರಿಲ್ಲ. ಪಟ್ಟಣ ಪಂಚಾಯತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕ್ಕೆ ಪೊಲೀಸರು, ಜನರ ಸಮಸ್ಯೆ ಹೈರಾಣ ಆಗುತ್ತಿದ್ದಾರೆ.

ಪಟ್ಟಣದಲ್ಲಿ ಶನಿವಾರ ವಾರದ ಸಂತೆ ನಡೆಯುತ್ತಿರುವ ಹಿನ್ನೆಲೆ ಬೆಳಗ್ಗೆ 8 ಗಂಟೆಯಿಂದ ಸಂಚಾರ ದಟ್ಟಣೆ ಉಂಟಾಗಿದೆ. ಪರಿಣಾಮ ರಸ್ತೆಯ ಮೇಲೆ ವಾಹನಗಳು ಗಂಟೆಗಟ್ಟಲೆ ನಿಲ್ಲಬೇಕಾಯಿತು. ಅಲ್ಕದೆ,. ಶಾಲಾ ವಿದ್ಯಾರ್ಥಿಗಳು ಸಂಚಾರ ದಟ್ಟಣೆ ಗೆ ಸಿಲುಕಿ ಹೈರಾಣ ಆದ ಘಟನೆ ನಡೆಯಿತು.

ಪಟ್ಟಣದಲ್ಲಿ ಓಡಾಡುವ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಮನಬಂದಂತೆ ವಾಹನಗಳನ್ನು ರಸ್ತೆ ಪಕ್ಕದಲ್ಲಿ, ಕೆಲವೊಮ್ಮೆ ರಸ್ತೆಯ ಮೇಲೆಯೇ ನಿಲ್ಲಿಸುತ್ತಾರೆ. ಎಲ್ಲಿಯೂ ನಿಲಗುಡೆ ಮಾರ್ಗ ಸೂಚಿಯು ಇಲ್ಲವೇ ಇಲ್ಲ. ಪರಿಣಾಮ ದಟ್ಟಣೆ ಹೆಚ್ಚಾಗಿ ಮಹಿಳೆಯರು, ಮಕ್ಕಳು, ವೃದ್ದರು, ಶಾಲಾ ವಿದ್ಯಾರ್ಥಿಗಳ ಓಡಾಡಟಕ್ಕೆ ತೊಂದರೆ ಆಗುತ್ತಿದೆ. ಅಪಘಾತ ಸಂಖ್ಯೆಯ ಹೆಚ್ಚುತ್ತಿದೆ. ಈ ಕುರಿತು ಪೊಲೀಸರಿಗೆ, ಪಪಂ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಪ್ರತಿ ಶನಿವಾರ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು, ವ್ಯಾಪಾರಿಗಳು ಬರುತ್ತಾರೆ. ವ್ಯಾಪಾರಸ್ಥರು ರಸ್ತೆಯ ಮೇಲೆಯೇ ತಮಗೆ ಬೇಕಾದ ಕಡೆ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಾರೆ.‌ಇದು ಸಂಚಾರ ದಟ್ಟಣೆ ಗೆ ಮತ್ತಷ್ಟು ಕಾರಣ ಎನ್ನಲಾಗಿದೆ.

ಪಟ್ಟಣ ಪಂಚಾಯತಿ ಅಧಿಕಾರಿಗಳು ಪುಟ್ ಪಾತ್ ಗಳ ಮೇಲೆ, ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಅಂಗಡಿಗಳಿಗೆ ಅವಕಾಶ ನೀಡಿದೆ. ಅಲ್ಲದೆ, ಯಾವುದೇ ವಾಣಿಜ್ಯ ಕಟ್ಟಡಗಳು ಪಾರ್ಕಿಂಗ್ ಸೌಲಭ್ಯ ಹೊಂದಿಲ್ಲ. ಪಟ್ಟಣದಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಇಲ್ಲವೇ ಇಲ್ಲ.‌ಮೊದಲು ಪುಟ್ ಪಾತ್, ರಸ್ತೆ, ಚರಂಡಿಗಳ ಮೇಲಿರುವ ಅಂಗಡಿಗಳನ್ನು, ರಸ್ತೆಯ ಮೇಲೆ ಇಟ್ಟಿರುವ ಅಂಗಡಿಗಳ ನಾಮಫಲಕಗಳನ್ನು ತೆರವುಗೊಳಿಸುವ ಕೆಲಸವನ್ನು ಪಪಂ ಅಧಿಕಾರಿಗಳು ಮಾಡಬೇಕು. ಪೊಲೀಸರು ರಸ್ತೆ ಬದಿ ಪಾರ್ಕಿಂಗ್ ನಿಲ್ಲಿಸುವುದನ್ನು ತಡೆಯಬೇಕು ಎಂದು ಪಪಂ ನಾಗರಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net