

ಬೆಳಗಾವಿ: ಇಲ್ಲಿನ ಕುವೆಂಪು ನಗರದ ಕೆಎಲ್‌ಇ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ವೃತ್ತದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಪ್ರತಿಮೆ (ಲಾಂಛನ) ಸ್ಥಾಪಿಸಲು ಕ್ರೆಡೈ ಮಹಿಳಾ ವಿಭಾಗದವರು ಮುಂದಾಗಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.
ಕುವೆಂಪು ನಗರದ ಕೆಎಲ್‌ಇ ಇಂಟರ್ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಅವರು,ಸಮಾಜಮುಖಿ ಕೆಲಸ ಮಾಡುತ್ತಿರುವ ಕ್ರೆಡೈ ಮಹಿಳಾ ವಿಭಾಗದವರು ಸರ್ಕಲ್ ಅಭಿವೃದ್ಧಿಗೆ ಮುಂದಾಗಿರುವುದು ಸಾಗತಾರ್ಹವಾದುದು. ವಿಶೇಷವಾಗಿ ಕುವೆಂಪು ನಗರದಲ್ಲಿರುವ ವೃತ್ತವನ್ನು ಅಭಿವೃದ್ಧಿಗೊಳಿಸುವುದು ಬಹುಮುಖ್ಯ ಕಾರ್ಯವಾಗಿದೆ. ಜತೆಗೆ ಸಂಚಾರ ಸಮಸ್ಯೆ ಮುಕ್ತಗೊಳಿಸುವುದು, ವೃತ್ತದ ಸೌಂದರ್ಯವನ್ನು ಹೆಚ್ಚಿಸುವುದು ಅಗತ್ಯವಿದೆ ಎಂದು ಹೇಳಿದರು.