ಬೆಳಗಾಂ ಶುಗರ್ಸ್ ಕಾರ್ಖಾನೆಗೆ ರೂವಾಂಡಾ ದೇಶದ ಹೈ ಕಮಿಷನರ್ ಭೇಟಿ

IMG-20240908-WA0014.jpg
Published on

ಬೆಳಗಾವಿ: ಬೆಳಗಾಂ ಶುಗರ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ಇಂದು ಪೂರ್ವ ಆಫ್ರಿಕಾದ ರೂವಾಂಡಾ ದೇಶದ ಹೈ ಕಮಿಷನರ್ ಜಾಕ್ವೆಲಿನ್ ಮುಕಂಜಿರಾ ಮತ್ತು ರೂವಾಂಡಾದ ರಾಜತಾಂತ್ರಿಕ ಶ್ರೀ.ಮೊಹನ ಸುರೇಶ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಯರಗಟ್ಟಿ ಶುಗರ್ಸ್,

ಸತೀಶ್ ಶುಗರ್ಸ್ ಮ್ಯಾನೇಜಿಂಗ್ ಡೈರೆಕ್ಟರ್, ಯುವ ನಾಯಕ ರಾಹುಲ್‌ ಜಾರಕಿಹೊಳಿ,

ಚೇರಮನ್, ಸಿ.ಎಫ್.ಓ ಪ್ರದೀಪಕುಮಾರ ಇಂಡಿ, ಹಿರಿಯಉಪಾಧ್ಯಕ್ಷ. ಎಲ್.ಆರ್.ಕಾರಗಿ, ಪಿ .ಡಿ.ಹಿರೇಮಠ, ಹಣಕಾಸು ವಿಭಾಗದ ಉಪಾಧ್ಯಕ್ಷ ಡಿ.ಆರ್ ಪವಾರ, ತಾಂತ್ರಿಕ ವಿಭಾಗದ ಉಪಾಧ್ಯಕ್ಷ. ವಿ.ಎಮ್ ತಳವಾರ, ಎ.ಎಸ್. ರಾಣಾ ತಂಡದ ಜೊತೆಗಿದ್ದರು.

ನಿಯೋಗವು ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ಕಾರ್ಖಾನೆಯ ಪ್ರಗತಿಯನ್ನು ಆಲಿಸಿ, ಕಾರ್ಖಾನೆಯ ಮೂಲಸೌಕರ್ಯ ಮತ್ತು ಉದ್ಯಮ ಸ್ನೇಹಿ ವಾತಾವರಣದಿಂದ ಪ್ರಭಾವಿತರಾದ ಶ್ರೀಮತಿ.ಜಾಕ್ವೆಲಿನ್ ಮುಕಂಜಿರಾ, ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಸ್ವಚ್ಛತೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥಾಪಕ ಅಧ್ಯಕ್ಷ, ಸಚಿವ ಸತೀಶ ಜಾರಕಿಹೊಳಿಯವರು ನಿಯೋಗವನ್ನು ಸ್ವಾಗತಿಸಿ ಇದೇ ವೇಳೆ ಮಾತನಾಡಿ, ಪೂರ್ವ ಆಪ್ರೀಕಾದ ರೂವಾಂಡ ದೇಶದ ಹೈ ಕಮಿಷನರ್ ಜಾಕ್ವೆಲಿನ್ ಮುಖಂಜಿರಾ ನಿಯೋಗದ ಭೇಟಿಯಿಂದ ರೂವಾಂಡಾ ಮತ್ತು ಬೆಳಗಾವಿಯ ನಡುವಿನ ವ್ಯಾಪಾರ ಅವಕಾಶಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಅಂತರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾಂ ಶುಗರ್ಸ್ ಕಾರ್ಖಾನೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net