ಮನರೇಗಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

07 Jaggu 11
ಬಾಕಿ ವೇತನ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮನರೇಗಾ ಹೊರಗುತ್ತಿಗೆ ನೌಕರರು ಜಿಪಂ ಸಿಇಒ ರಾಹುಲ್ ಶಿಂಧೆಗೆ ಮನವಿ ಸಲ್ಲಿಸಿದರು. ಶಂಕರ ಶಿರಗುಪ್ಪಿ, ಚೇತನ ಶಿರಹಟ್ಟಿ, ಸಾತಪ್ಪ ಇರಗಾರ, ಅವಿನಾಶ ಬೆಟಗೇರಿ, ವಿಶ್ವನಾಥ ಹಟ್ಟಿಹೊಳಿ ಇತರರಿದ್ದರು.
Published on

ಬೆಳಗಾವಿ: ಆರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಮನರೇಗಾ ಹೊರಗುತ್ತಿಗೆ ನೌಕರರು ನಗರದ ಜಿಪಂ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು.

ಜಿಲ್ಲಾದ್ಯಂತ ಜಿಪಂ, ತಾಪಂ ನರೇಗಾ ಹೊರಗುತ್ತಿಗೆ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಬಿಎಫ್‌ಟಿ ಹಾಗೂ ಗ್ರಾಮ ಕಾಯಕಮಿತ್ರರು ಸೇರಿ ಒಟ್ಟು 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ=ನಿರ್ವಹಿಸುತ್ತಿದ್ದೇವೆ. 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ದಿನನಿತ್ಯದ ಜೀವನ ನಡೆಸಲು, ಕಚೇರಿಗೆ ಸಂಬಂಧಿಸಿದ ಕ್ಷೇತ್ರ ಭೇಟಿಗೂ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಸರ್ಕಾರ 6 ತಿಂಗಳ ವೇತನ ಪಾವತಿಸುವ ಜತೆಗೆ ಸೇವಾಭದ್ರತೆ ಒದಗಿಸಬೇಕು. ಆರೋಗ್ಯ ವಿಮೆ ಸೌಲಭ್ಯ ಶೀಘ್ರ ಜಾರಿಗೊಳಿಸಬೇಕು. ಪ್ರತಿ ತಿಂಗಳ ವೇತನ ಪಾವತಿಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಿಇಒ ರಾಹುಲ್ ಶಿಂಧೆ, ತಾಂತ್ರಿಕ ಸಮಸ್ಯೆಯಿಂದ ವೇತನ ಪಾವತಿಯಾಗುವಲ್ಲಿ ವಿಳಂಬವಾಗಿದ್ದು, ಶೀಘ್ರ ಕ್ರಮ ವಹಿಸಲಾಗುವುದು ಎಂದರು.

ನರೇಗಾ ಸಿಬ್ಬಂದಿ ಶಂಕರ ಶಿರಗುಪ್ಪಿ, ಚೇತನ ಶಿರಹಟ್ಟಿ, ಸಾತಪ್ಪ ಇರಗಾರ, ಅವಿನಾಶ ಬೆಟಗೇರಿ, ವಿಶ್ವನಾಥ ಹಟ್ಟಿಹೊಳಿ, ಮಹಾಂತೇಶ ಬಾದವನಮಠ, ಮಾರುತಿ | ಶಿವಾಪುರ, ವೈಭವ ಬನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net