

ಮಧುಗಿರಿ :ಸ್ವಚ್ಛತೆಯಲ್ಲಿ ವಿನೂತನ ಪ್ರಯೋಗ ಅಳವಡಿಸಿಕೊಳ್ಳುವ ಮೂಲಕ ಮಧುಗಿರಿ ಪುರಸಭೆ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕೇಂದ್ರೀಕೃತ ಸುಸ್ಥಿರ ನ ತ್ಯಾಜ್ಯ ನಿರ್ವಹಣೆ ಕಸ ವಿಲೇವಾರಿಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಗಳಿಸಿದೆ. ಕುಮಟಾ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅ.11ರಂದು ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಮತ್ತು ನಗರಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಪ್ರಶಸ್ತಿ ಮತ್ತು 75 ಸಾವಿರ ನಗದು ಬಹುಮಾನ ದೊರೆತಿದೆ. ಕಸ ವಿಲೇವಾರಿಯನ್ನು ಸವಾಲಾಗಿ ಸ್ವೀಕರಿಸಿರುವ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರ ಸಹಕಾರದೊಂದಿಗೆ ಪಟ್ಟಣ ಸ್ವಚ್ಛವಾಗಿರಿಸಿದ್ದಾರೆ.
ಕಸಕ್ಕೆ ಸ್ಥಳೀಯ ಮಾರುಕಟ್ಟೆ: ಒಂದೆಡೆ ಕಸ ವಿಲೇವಾರಿ, ಮತ್ತೊಂದೆಡೆ ಆದಾಯ ಎಂಬುದನ್ನು ಕಂಡುಕೊಂಡಿರುವ ಪುರಸಭೆ, ಟಕದಲ್ಲಿ ಹಸಿ, ಒಣ, ಬಯೋಮೆಡಿಕಲ್ ಮತ್ತು ಸ್ಯಾನಿಟರಿ ಕಸವೆಂದು 4 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಹಸಿ ಕಸದಿಂದ ಮಧುಗೋಲ್ಡೃ್ ಗೊಬ್ಬರ ತಯಾರಿಸಲಾಗುತ್ತದೆ. ಒಣಕಸವನ್ನು ಕಲಬುರಗಿಯಲ್ಲಿನ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಸಾಗಿಸುವ ಯೋಜನೆ ಇತ್ತಾದರೂ ಕರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಸ್ಥಳೀಯವಾಗಿ ಮಾರುಕಟ್ಟೆ ಕಂಡುಕೊಳ್ಳಲಾಗಿದೆ. 12 ಎಕರೆಯಲ್ಲಿ ತ್ಯಾಜ್ಯ ವಿಲೇವಾರಿ ಟಕವಿದ್ದು, ಉಳಿದ ಜಮೀನಿನಲ್ಲಿ ತಾವೇ ತಯಾರಿಸಿದ ಮಧುಗೋಲ್ಡೃ್ ಗೊಬ್ಬರ ಬಳಸಿ ತರಕಾರಿ, ಸೊಪ್ಪು ಬೆಳಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಮಧುಗೋಲ್ಡೃ್ಗೆ ಬಾರಿ ಬೇಡಿಕೆ : ಹಸಿ ಕಸಕ್ಕೆ ಸಗಣಿ ನೀರು ಮಿಶ್ರಣ ಮಾಡಿ 45 ದಿನ ಸಂಗ್ರಹಿಸಿಟ್ಟು, ನಂತರ ಅದಕ್ಕೆ ಎರೆಹುಳುಗಳನ್ನು ಬಿಡಲಾಗುತ್ತದೆ. ಇದರಿಂದ ಉತ್ತಮ ಸಾವಯವ ಗೊಬ್ಬರ ತಯಾರಾಗುತ್ತಿದ್ದು, ಮಧುಗೋಲ್ಡೃ್ ಹೆಸರಿನಲ್ಲಿ 25 ಕೆ.ಜಿ.ಗೊಬ್ಬರಕ್ಕೆ 125 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಟಕದಲ್ಲಿ ಗುಜರಾತ್‌ನ ಗಿರ್ ಮತ್ತು ಕಾಂಕ್ರೆಜ್ ತಳಿಯ 4 ಹಸುಗಳನ್ನು ಸಾಕಿದ್ದು, ಮದುವೆ, ಹಬ್ಬ ಹರಿದಿನ ಇತರ ಕಾರ್ಯಕ್ರಮಗಳಲ್ಲಿ ಬಳಸಿ ಬಿಸಾಡುವ ಬಾಲೆ ಎಲೆಗಳನ್ನು ಹಸುಗಳಿಗೆ ನೀಡಲಾಗುತ್ತಿದೆ. ಇವುಗಳ ಸಗಣಿಯನ್ನು ಗೊಬ್ಬರಕ್ಕೆ ಮಿಶ್ರಣ ಮಾಡಲಾಗುತ್ತಿದೆ. ಬಾತುಕೋಳಿಗಳನ್ನೂ ಸಾಕಲಾಗಿದೆ, ಹಸಿ ಮಾಂಸವನ್ನು ಇವುಗಳಿಗೆ ಆಹಾರವನ್ನಾಗಿ ನೀಡುವ ಮೂಲಕ ಕೋಳಿತ್ಯಾಜ್ಯ ವಿಲೇವಾರಿಗೆ ವಿನೂತನ ಮಾರ್ಗ ಕಂಡುಕೊಳ್ಳಲಾಗಿದೆ.
ವಿನೂತನ ಯೋಜನೆಗಳಿಂದ ಮಾದರಿ : ಪಟ್ಟಣದ ಹಳೇ ಡಿವೈಎಸ್‌ಪಿ ಕಚೇರಿ ಮತ್ತು ಪುರಸಭೆ ಆವರಣದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದೆ. ತಿಂಗಳಿಗೆ 60 ಟನ್ ಕಸ ಸಂಗ್ರಹವಾಗುತ್ತದೆ. ಇದಕ್ಕೆ ಗಂಜಲ, ಸಗಣಿ ನೀರು ಹಾಕಿ ಮುಚ್ಚಿಟ್ಟರೆ 30 ದಿನಗಳ ನಂತರ 10 ರಿಂದ 15 ಟನ್ ಗೊಬ್ಬರ ಸಿಗುತ್ತದೆ. ಈ ಹಿಂದೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನ 2020ರಲ್ಲಿ ಪುರಸಭೆ ರಾಜ್ಯದಲ್ಲ್ಲಿ 4ನೇ ಸ್ಥಾನ ಗಳಿಸಿತ್ತು.
2018-19ನೇ ಸಾಲಿನಲ್ಲಿ ಕೇಂದ್ರೀಕೃತ ಸುಸ್ಥಿರ ನ ತ್ಯಾಜ್ಯ ನಿರ್ವಹಣೆ ಕಸ ವಿಲೇವಾರಿ ಮಾಡುವಲ್ಲಿ ಮಧುಗಿರಿ ಪುರಸಭೆ 2ನೇ ಸ್ಥಾನ ಗಳಿಸಿದ್ದು, ಇದಕ್ಕೆ ಸಹಕರಿಸಿದ ಪುರಸಭೆ ಸದಸ್ಯರು, ಅಧಿಕಾರಿಗಳಿಗೂ ಮತ್ತು ಪೌರ ಕಾರ್ಮಿಕರಿಗೆ ಧನ್ಯವಾದಗಳು. ನಜ್ಮಾ, ಪುರಸಭೆ ಮುಖ್ಯಾಧಿಕಾರಿ, ಮಧುಗಿರಿ