ಮಹದೇಶ್ವರ ಬೆಟ್ಟದಲ್ಲಿ ಭಾರಿ ಮಳೆ

11 HANUR 4
Published on

ಹನೂರು: ತಾಲೂಕಿನ ಧಾರ್ಮಿಕ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದ್ದರಿಂದ ನಂದನವನದ ಮಜ್ಜನ ಬಾವಿಯ ಆವರಣಕ್ಕೆ ನೀರು ನುಗ್ಗಿತ್ತು.

ಬೆಟ್ಟದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತವರಣವಿದ್ದು, ಆಗಾಗ್ಗೆ ಸೋನೆ ಮಳೆ ಸುರಿಯುತ್ತಿತ್ತು. ಸಂಜೆ 5.20ರಲ್ಲಿ ಪ್ರಾರಂಭವಾದ ಜೋರು ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ದೇಗುಲದಲ್ಲಿ ದೇವರಿಗೆ ನಿತ್ಯ ಅಭಿಷೇಕಕ್ಕಾಗಿ ನೀರು ತರುವ ನಂದನವನದ ಮಜ್ಜನ ಬಾವಿ ಆವರಣಕ್ಕೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿತು. ದೇಗುಲದ ಆವರಣದತ್ತಲೂ ನೀರು ಹರಿಯಿತು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ದೇಗುಲ ಮುಂಭಾಗದ ರಂಗಮಂದಿರದಲ್ಲಿ ಆಶ್ರಯ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net