ಚೊಟ್ಟನಹಳ್ಳಿ, ಹಾಲು ಉತ್ಪಾದಕರಿಗೆ ಸನ್ಮಾನ

15 mlv 1
Published on

ಡೇರಿಗೆ 8 ಲಕ್ಷ ರೂ. ನಿವ್ವಳ ಲಾಭ

ಮಳವಳ್ಳಿ : ತಾಲೂಕಿನ ಚೊಟ್ಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ 2023-24 ಸಾಲಿನಲ್ಲಿ ನಿವ್ವಳ 8.51.480 ರೂ. ಆದಾಯ ಗಳಿಸಿದೆ ಎಂದು ಕಾರ್ಯದರ್ಶಿ ಸಿ.ಕೆ. ಸಿದ್ದೇಗೌಡ ಹೇಳಿದರು.
ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ವಾರ್ಷಿಕ ವರದಿ ಮಂಡಿಸಿದರು.
ಆಡಳಿತಾಧಿಕಾರಿ ರಾಮಕೃಷ್ಣ ಮಾತನಾಡಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಮೇಲಧಿಕಾರಿಗಳ ಆದೇಶ ಬರಬೇಕಿದೆ. ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆಗೆ ಮಾಡುವುದರಿಂದ ಉತ್ಪಾದರಿಗೆ ಬೆಲೆಯೂ ಸಿಗುವುದರ ಜತೆಗೆ ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರಿಯಾಗಲಿದೆ. ಷೇರುದಾರರು ಸಹಕಾರ ಮನೋಭಾವದಿಂದ ಸಂಘದ ಅಭಿವೃದ್ಧಿಗೆ ಕೈ ಜೋಡಿಸುವಂತೆ ಸಲಹೆ ನೀಡಿದರು. ಸನ್ಮಾನ: ವಾರ್ಷಿಕ ಹೆಚ್ಚು ಹಾಲು ಪೂರೈಸಿದ್ದ ಉತ್ಪಾದಕರಾದ ಸಿದ್ದೇಗೌಡ (ಪ್ರಥಮ), ಚಿಕ್ಕರಾಜು (ದ್ವಿತೀಯ), ಸಿದ್ದರಾಜು (ತೃತಿಯ) ಮೀನಾಕ್ಷಮ್ಮ, ಪದ್ಮ ರವರಿಗೆ ಬಹುಮಾನ ನೀಡಿ ಗೌವರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಷೇರುದಾರ ಮಕ್ಕಳಿಗೆ ನಗದು ಬಹುಮಾನ ನೀಡ ಪ್ರೋತ್ಸಾಹಿಸಲಾಯಿತು. ಸಭೆಯಲ್ಲಿ ಷೇರುದಾರರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net