ಪ್ರಕರಣಗಳು ಇತ್ಯರ್ಥಕ್ಕೆ ಎಲ್ಲರ ಸಹಕಾರ ಮುಖ್ಯ

23 mlv 1
Published on

ಮಳವಳ್ಳಿ : ಪಟ್ಟಣದ ನ್ಯಾಯಾಲಯದಲ್ಲಿ ತ್ವರಿತ ಗತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗಿದೆ ಎಂಬ ಹೆಗ್ಗಳಿಕೆ ದೊರಕಿದ್ದರೆ ಅದಕ್ಕೆ ಅದಕ್ಕೆ ವಕೀಲ ಮಿತ್ರರು ಹಾಗೂ ಕೋರ್ಟ್ ಸಿಬ್ಬಂದಿ ಸಹಕಾರವೇ ಕಾರಣ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ ಶಿವಪೂಜಿ ಹೇಳಿದರು. ಕಳೆದ ಮೂರುವರೆ ವರ್ಷಗಳ ಕಾಲ ಪಟ್ಟಣದ ಜೆ ಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶಿವಪೂಜಿ ಅವರಿಗೆ ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ವಕೀಲರ ಸಹಕಾರ ವಿಲ್ಲದೆ ನನಗೆ ಇಷ್ಟು ಕೆಲಸ ಮಾಡಲು ಸಾಧ್ಯವಿರಲಿಲ್ಲ ಎಂದರು. ಮೂರುವರೆ ವರ್ಷಗಳ ಕಾಲ ಇಲ್ಲಿನ ವಕೀಲರು ಸಿಬ್ಬಂದಿ ಸಾರ್ವಜನಿಕರು ತೋರಿದ ಪ್ರೀತಿ, ವಿಶ್ವಾಸಗಳು ಕೌಟುಂಬಿಕ ಬಾಂಧವ್ಯ ಮೂಡಿಸಿವೆ ಎಂದರು.

ಕೋರ್ಟ್ ಸಂಕೀರ್ಣಕ್ಕೆ ಬಂದಾಗ ಪ್ರಕರಣ ಇತ್ಯರ್ಥವಷ್ಟೇ ನನ್ನ ಆದ್ಯತೆಯಾಗಿತ್ತು. ಈ ಕಾರಣದಿಂದ ಕೆಲವೊಮ್ಮೆ ವಕೀಲರೊಂದಿಗೆ ನಿಷ್ಠುರವಾಗಿ ನಡೆದುಕೊಂಡಿದ್ದೇನೆ. ಈ ಹಂತದಲ್ಲಿ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುವೆ ಎಂದರು.

ಹಿರಿಯ ಶ್ರೇಣಿ ನ್ಯಾಯಾಧೀಶ ಎಂ .ಮಹೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಿಗೆ ಅನ್ಯಾಯವಾದಾಗ ನ್ಯಾಯ ಪಡೆಯಬೇಕೆಂದು ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೋರ್ಟಿಗೆ ಬರುತ್ತಾರೆ. ಅವರ ನಂಬಿಕೆ ಹುಸಿಯಾಗದ ನಿಟ್ಟಿನಲ್ಲಿ ವಕೀಲರು ಸಾಕ್ಷಾಧಾರಗಳನ್ನು ನ್ಯಾಯಾಲಯದಲ್ಲಿ ಮಂಡಿಸಬೇಕು. ಆಗ ಮಾತ್ರ ನ್ಯಾಯಾಧೀಶರಾದ ನಾವು ಸೂಕ್ತ ತೀರ್ಪನ್ನು ನೀಡಲು ಸಾಧ್ಯವಾಗುತ್ತದೆ. ಇದರಿಂದ ಸಮಾಜದಲ್ಲಿ ವಕೀಲರಿಗೆ ಹಾಗೂ ನ್ಯಾಯಾಂಗಕ್ಕೆ ಗೌರವ ಬರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಡಿ. ಎಂ . ಸುಂದರ್ ಮಾತಮಾಡಿ, ನ್ಯಾಯಾಧೀಶ ರಾಗಿ, ನ್ಯಾಯಾಧೀಶ ಶಿವಪೂಜಿ ಅವರ ಸರಳತೆ ಹಾಗೂ ಸ್ನೇಹಪರ ನಡೆಗಳು ಮಾದರಿಯಾಗಿವೆ ಎಂಧರು. ಒಂದು ತಿಂಗಳಲ್ಲಿ 70 ಕೇಸ್

ಇತ್ಯರ್ಥಪಡಿಸಿರುವುದು ಇವರ ವಿಶೇಷತೆ ಎಂದು ಶ್ಲಾಘಿಸಿದರು. ವರ್ಗಾವಣೆಗೊಂಡ ನ್ಯಾಯಾಧೀಶ ಶಿವಪೂಜಿ ದಂಪತಿಗೆ ವಕೀಲರ ಸಂಘದ ವತಿಯಿಂದ ನೆನೆಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ, ಸರ್ಕಾರಿ ಸಹಾಯಕ ಅಭಿಯೋಜಕ ಶಂಕರ ಸ್ವಾಮಿ, ಹೆಚ್ಚುವರಿ ಸರ್ಕಾರಿ ವಕೀಲ ಶ್ರೀಕಂಠ ಸ್ವಾಮಿ, ಹಿರಿಯ ವಕೀಲರಾದ ಗುರುಸ್ವಾಮಿ, ಮಲ್ಲಪ್ಪ, ನಟೇಶ, ಮುತ್ತುರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net