ರಿಲ್ಯಾಕ್ಸ್ ಮೂಡ್‌ನಲ್ಲಿ ಎಂಎಲ್‌ಎಗಳು

11mdk04
Published on

ಮಡಿಕೇರಿ:

ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಇಬ್ಬರು ಶಾಸಕರು ಗುರುವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆದರು. ಸುಮಾರು ೩ ತಿಂಗಳಿನಿಂದ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರುಗಳು, ವ್ಯಯಕ್ತಿಕ ಕೆಲಸ, ತೋಟದ ಕೆಲಸ, ಕುಟುಂಬದ ಜೊತೆ ಕಳೆಯಲು ಸಮಯ ಮೀಸಲಿಟ್ಟಿದ್ದರು.

ಮಡಿಕೇರಿಯ ಮನೆಯಲ್ಲಿ ಗಿಡಕ್ಕೆ ನೀರು ಹಾಕಿ, ಸಾಕು ನಾಯಿಗಳಾದ ರೂಬಿ, ಕ್ಯಾಂಡಿ,ಓರಿಯೊದೊಂದಿಗೆ ವಿರಾಜಪೇಟೆ ಶಾಸಕ ಬೋಪಯ್ಯ ಕಾಲ ಕಳೆದರು. ಈ ವೇಳೆ ಮಾತನಾಡಿದ ಅವರು, ನಾನು ಸಾಕಷ್ಟು ಚುನಾವಣೆ ಎದುರಿಸಿದ್ದೇನೆ. ಆದರೆ ಕೊಡಗಿನಲ್ಲಿ ಇಂತಹ ಚುನಾವಣೆ ಎಂದೂ ಕಂಡಿಲ್ಲ. ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ. ಈ ಭಾರಿ ಕೊಡಗಿನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.

ನಾವು ಅಭಿವೃದ್ಧಿಯ ಆದರದಲ್ಲಿ ಮತ ಕೇಳಿದ್ದೇವೆ. ಎದುರು ಪಕ್ಷದವರು ಜಾತಿ ರಾಜಕಾರಣ ಮಾಡಿದ್ದಾರೆ. ಯಾರು ಕೂಡ ಗ್ರಾ.ಪಂ ಚುನಾವಣೆಯಲ್ಲೂ ನಿಲ್ಲದ ಮಟ್ಟಿಗೆ ಇಲ್ಲಿನ ರಾಜಕೀಯ ತಂದಿದ್ದಾರೆ. ಸಾಮಾಜಿಕ ಕಳಕಳಿಯ ನಾಯಕರು ಮುಂದೆ ಕೊಡಗಿನಲ್ಲಿ ಬರಲು ಸಾಧ್ಯ ಇಲ್ಲ. ಕೊಡಗಿನಲ್ಲಿ ಮೊದಲ ಬಾರಿಗೆ ವ್ಯಾಪಾರಿಕರಣ ನಡೆದಿದೆ. ಬೆಂಗಳೂರು ಮತ್ತು ಹಾಸನ ರಾಜಕಾರಣವನ್ನ ಕೊಡಗಿನಲ್ಲಿ ತಂದು ಹಾಳು ಮಾಡಿದ್ದಾರೆ.

ಕೊಡಗಿನಲ್ಲಿ ಯಾವುದೇ ಹಣಬಲ ನಡೆಯುವುದಿಲ್ಲ ಸಮೀಕ್ಷೆಗಳ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಬೋಪಯ್ಯ ಪ್ರತಿಕ್ರಿಯಿಸಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತೋಟದ ಮನೆಯಲ್ಲೆ ವಿಹರಿಸುತ್ತಾ ರಿಲ್ಯಾಕ್ಸ್ ಮಾಡಿದರು. ತೋಟದ ಕೆಲಸದಲ್ಲೂ ತೊಡಗಿಸಿಕೊಂಡರು. ಕೆಲಸಗಾರರೊಂದಿಗೆ ತೋಟದ ಕೆಲಸ ವೀಕ್ಷಿಸಿದರು.

ಸ್ವತಃ ತಾವೇ ಪಿಕಪ್ ವಾಹನ ಓಡಿಸಿಕೊಂಡು ತೋಟ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೊಡಗಿನಲ್ಲಿ ಈ ಬಾರಿ ಸೂಟ್ಕೆಸ್ ರಾಜಕಾರಣ ನಡೆಯುತ್ತಿದೆ. ಸ್ಥಳೀಯ ಕಾಂಗ್ರೇಸ್ ನಾಯಕರ ಕಡೆಗಣಿಸಿರುವ ಬಗ್ಗೆ ಜನರಿಗೆ ನೋವಿದೆ. ಇದು ನನ್ನದು ೭ನೇ ಚುನಾವಣೆ ೫ ಬಾರಿ ಗೆದ್ದಿದ್ದೇನೆ ೬ನೇ ಬಾರಿಯೂ ಗೆಲ್ಲುವ ವಿಶ್ವಾಸ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net