ಸರ್ವ ಜನಾಂಗದ ಹಿತ ಕಾಯಲಿ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ

Mlc Marithbegowda)
Published on

ಮಂಡ್ಯ: ಪೂರ್ಣಬಹುಮತ ಪಡೆದಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಸರ್ವ ಜನಾಂಗದ ಹಿತ ಕಾಯುವ ಸುಭದ್ರ ಸರ್ಕಾರ ನೀಡುವಂತೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ ನೀಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮತದಾರರು ಜಾತಿ, ಧರ್ಮವನೆನ್ನುವ ಬೇಧ ಮಾಡದೇ ಸ್ವಚ್ಛ ಆಡಳಿತಕ್ಕಾಗಿ ಹಾಗೂ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ, ಮಹಿಳೆಯರ, ಕೂಲಿ ಕಾರ್ಮಿಕರ, ನಿರುದ್ಯೋಗಿಗಳ ಉದ್ಧಾರಕ್ಕಾಗಿ ಮತ್ತು ರಾಜ್ಯದ ಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬಹುಮತ ನೀಡಿದ್ದಾರೆ. ಅದರಂತೆ ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತದ ನಿರೀಕ್ಷೆಯಿಟ್ಟು ಮತದಾರರು ನೀಡಿರುವ ಜನಾದೇಶವನ್ನು ಗೌರವಿಸಬೇಕು. ಅಂತೆಯೇ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿವಿವೇಕಾನಂದ, ಕನಕದಾಸರು, ಕಬೀರರು, ಪುರಂದರದಾಸರು ಮುಂತಾದ ಸಾಧು, ಸಂತರ ತತ್ವ ಸಿದ್ಧಾಂತದ ಆಧಾರದ ಮೇಲೆ ಎಲ್ಲ ಜನಾಂಗದ ಹಿತ ಕಾಯಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net