ಶಿಕ್ಷಕರ ಪ್ರತಿನಿಧಿಯಾಗಿ ನಿರಂತರ ಹೋರಾಟ: ಎಂಎಲ್‌ಸಿ ಮರಿತಿಬ್ಬೇಗೌಡ ಹೇಳಿಕೆ

MLC Marithibbe Gowda election campaign mandya
Published on

ಮಂಡ್ಯ: ಕಳೆದ 20 ವರ್ಷದಿಂದ ಶಿಕ್ಷಕರ ಪ್ರತಿನಿಧಿಯಾಗಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಅಂತೆಯೇ ಶಿಕ್ಷಕ ವರ್ಗದ ಹಕ್ಕೊತ್ತಾಯ ಮತ್ತು ಮನವಿಗಳಿಗೆ ಸ್ಪಂದಿಸುವುದರ ಜತೆಗೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜು, ಪಿಇಎಸ್ ಕಾಲೇಜು, ಐಟಿಐ ಕಾಲೇಜು, ಮಾಂಡವ್ಯ ಕಾಲೇಜಿಗೆ ಭೇಟಿ ನೀಡಿ ಮಾತಯಾಚನೆ ಮಾಡಿದ ಅವರು, ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 2024ರ ಜೂನ್‌ನಲ್ಲಿ ನಡೆಯುವ ಚುನಾವಣೆ ಸಂಬಂಧ ಈಗಾಗಲೇ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ. ಶಿಕ್ಷಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು, ಕ್ಷೇತ್ರ ವ್ಯಾಪ್ತಿಯ ಮತದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮೊದಲ ಹಂತವಾಗಿ ಶಿಕ್ಷಕರನ್ನು ಚುನಾವಣಾ ಆಯೋಗದ ನಮೂನೆ 19ರ ಫಾರ್ಮ್ ಅನ್ನು ಚುನಾವಣಾ ಆಯೋಗ ಕಳುಹಿಸಿಕೊಟ್ಟಿದೆ. ಜತೆಗೆ ನಾವು ಸಹ ಕಾಲೇಜುಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಎಲ್ಲರೂ ನಿಗದಿತ ಅವಧಿಯೊಳಗೆ ನೋಂದಣಿ ಕಾರ್ಯಕ್ಕೆ ಸಹಕರಿಸಬೇಕು ಎಂದರು.

ನಿವೃತ್ತ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು, ಜಿ.ಎನ್.ಶಿವರುದ್ರಪ್ಪ, ಎಚ್.ವಿ.ಜಯರಾಮು, ಕೃಷ್ಣೇಗೌಡ, ಕೋಣನಹಳ್ಳಿ ಜಯರಾಮು, ಸಂತೋಷ್, ದಾನಿಗೌಡ, ಕೆಂಪಮ್ಮ, ನವೀನ್, ಲೋಕೇಶ್, ತಂಡಸನಹಳ್ಳಿ ಲಿಂಗರಾಜು, ರಾಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net