ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಖಂಡನೀಯ : ಎಂಎಲ್‌ಸಿ ಕಿಶೋರ್‌ಕುಮಾರ್

Kishore Kumar 24oct24_1
Published on


ಮಂಗಳೂರು : ಜನಔಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಜನಔಷಧಿ ಕೇಂದ್ರಗಳು ಬಡವರಿಗೆ ಅವಶ್ಯಕವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಔಷಧಿ ಕೊಡಬೇಕು ಎನ್ನುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ
ಹೇಳಿಕೆ ಕಾಂಗ್ರೆಸ್ ಸರ್ಕಾರದ ಬಡವರ ವಿರೋಧಿ ನಿಲುವನ್ನು ಸಾಬೀತು ಪಡಿಸಿದೆ ಎಂದು ಎಂಎಲ್‌ಸಿ ಕಿಶೋರ್‌ಕುಮಾರ್ ಹೇಳಿದ್ದಾರೆ.
ಜನಔಷಧಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಕೇಂದ್ರ ಲಕ್ಷಾಂತರ ಬಡ ಜನರಿಗೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಒದಗಿಸುತ್ತಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಇಂದು ಈ ಯೋಜನೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ. 100 ರಷ್ಟು ಔಷಧಿಗಳ ಲಭ್ಯತೆ ಇದೆಯೇ? ರಾಜ್ಯ ಸರ್ಕಾರ ಜನಔಷಧಿ ಕೇಂದ್ರವನ್ನು ನಿರ್ಬಂಧಿಸುವುದು ರಾಜಕೀಯ ಪಿತೂರಿಯಾಗಿದೆ. ತಕ್ಷಣ ಈ ತೀರ್ಮಾನವನ್ನು ಹಿಂಪಡೆಯಬೇಕು. ಬಡವರ ಆರೋಗ್ಯದ ಹಕ್ಕನ್ನು ಕಿತ್ತುಕೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.
..................................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net