ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಗೆ ಬದ್ಧ; ಚನ್ನರಾಜ ಹಟ್ಟಿಹೊಳಿ ಭರವಸೆ

IMG-20230710-WA0045.jpg
Published on


ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಕ್ಕೆ ಹೆಚ್ಚಿನ ಯೋಜನೆಗಳ ತರುವ ಮೂಲಕ‌ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ವಿಧಾನಪರಿಷತ್ ನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಕ್ಕಸಕೊಪ್ಪ ಗ್ರಾಮದಲ್ಲಿ  ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಕೃಪೆಯಿಂದಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಇದನ್ನು ಅಧಿಕಾರ ಎಂದು ಪರಿಗಣಿಸದೆ ಸೇವೆಗೆ ಸಿಕ್ಕ ಅವಕಾಶ ಎಂದೇ ಭಾವಿಸಿ ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ಇಡೀ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಮನೋಹರ ಬೆಳಗಾಂವ್ಕರ್, ಪೂಜಾ ಸುತಾರ, ಯಲ್ಲಪ್ಪ ಡೇಕೊಳ್ಕರ್, ನಿಂಗಪ್ಪ ಮೊರೆ, ಡಾಕಳು ಪಾಟೀಲ, ಕಾಶೀನಾಥ್ ಮೊರೆ, ಲಕ್ಷ್ಮೀ ಪಾಟೀಲ, ಮಂಜುಳಾ ಕಾಂಬಳೆ, ಮಹೇಶ ಪಾಟೀಲ, ಗಾಯತ್ರಿ ಸುತಾರ, ಬಬ್ಲು ನಾವಗೇಕರ್, ಸಾಗರ ನಾಯ್ಕ್, ಸಾತಪ್ಪ ಪಾಟೀಲ, ವಿಲಾಸ ಪಾಟೀಲ, ಲಕ್ಷ್ಮಣ ಕಾಂಬಳೆ ಹಾಗೂ‌ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net