

ಮಂಗಳೂರು : ತುಳು ಶಿಕ್ಷಕರ ಗೌರವ ಸಂಭಾವನೆ ಪಾವತಿಗಾಗಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತುಳು ಪಠ್ಯ ಬೋಧಿಸುವ ಗೌರವ ಶಿಕ್ಷಕರಿಗೆ ಕಳೆದ 3 ವರ್ಷಗಳಿಂದ ಗೌರವ ಸಂಭಾವನೆ ಪಾವತಿಯಾಗಿಲ್ಲ. ಕರ್ನಾಟಕ ತುಳು ಅಕಾಡೆಮಿಯು ಹಿಂದಿನ ವರ್ಷಗಳಲ್ಲಿ ತುಳು ಗೌರವ ಶಿಕ್ಷಕರಿಗೆ ಮಾಸಿಕ 3000 ರೂ. ಗೌರವ ಸಂಭಾವನೆ ನೀಡುತ್ತಿತ್ತು. ಪ್ರಸ್ತುತ ಇದೇ ಸಂಭಾವನೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ತುಳು ಶಿಕ್ಷಕರಿಗೆ 2020-21, 2021-22 ಹಾಗೂ 2022-23ನೇ ವಾರ್ಷಿಕ ಸಾಲಿನಿಂದ ಒಟ್ಟು 27,60,000 ರೂ. ಗೌರವ ಸಂಭಾವನೆ ಪಾವತಿಸಲು ಬಾಕಿ ಇದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.