ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ 100 ಕೋಟಿ ಒಡೆಯ

jds
Published on

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಕೋಟ್ಯಾಧಿಪತಿಯಾಗಿದ್ದು, 101.85 ಕೋಟಿ ರೂ. ಸ್ಥಿರ, 16.09 ಕೋಟಿ ರೂ.ಚರ ಆಸ್ತಿ ಹೊಂದಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಲು ಮುಂದಾಗಿರುವ ಇವರು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ.

ಪತ್ನಿ ಕೆ.ಎಂ. ಗೀತಾ 60.40 ಲಕ್ಷ ರೂ. ಚರ, 6.20 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ವಿವೇಕಾನಂದ ಒಟ್ಟು 16.42 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಪತ್ನಿ ಯಾವುದೇ ಸಾಲವನ್ನು ಹೊಂದಿಲ್ಲ. ವಿವೇಕಾನಂದ ಹಾಗೂ ಅವರ ಪತ್ನಿ ಬಳಿ ಆಡಿ, ಮರ್ಸಿಡಿಸ್ ಬೆನ್ಸ್ ಕಾರು ಹಾಗೂ ಬೈಕ್‌ಗಳು ಇವೆ. ವಿವೇಕಾನಂದ ಬಳಿಯಲ್ಲಿ 1.5 ಕೆ.ಜಿ. ಚಿನ್ನ, 30 ಕೆ.ಜಿ. ಬೆಳ್ಳಿ, ಪತ್ನಿ ಬಳಿ 1 ಕೆ.ಜಿ. ಚಿನ್ನ, 10 ಕೆ.ಜಿ. ಬೆಳ್ಳಿ ಇದೆ. ಇವರ ಮೇಲೆ ಯಾವುದೇ ಪ್ರಕರಣಗಳು ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net