ವಿಧಾನ ಪರಿಷತ್‌ಗೆ ಇಂಚರ ಅವಿರೋಧ ಆಯ್ಕೆ

22-klr-15
Published on

ಕೋಲಾರ: ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರಾಗಿ ನಗರದ ಉದ್ಯಮಿ, ಇಂಚರ ಗೋವಿಂದರಾಜು (ಜೆಡಿಎಸ್) ಅವಿರೋಧ ಆಯ್ಕೆಯಾಗಿದ್ದು, ವಿಧಾನ ಪರಿಷತ್ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೋಮವಾರ ಆಯ್ಕೆ ಪ್ರಮಾಣ ಪತ್ರ ನೀಡಿದರು.

ನಾಮಪತ್ರ ವಾಪಸಾತಿಗೆ ಕೊನೇ ದಿನವಾಗಿದ್ದ ಸೋಮವಾರ ಅವರ ವಿರುದ್ಧ ಕಣದಲ್ಲಿ ಯಾರೂ ಇಲ್ಲದ ಕಾರಣ ಅವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಲಾಯಿತು. ಪುತ್ರ ಡಾ.ಪ್ರವೀಣ್‌ರಾಜ್, ಜೆಡಿಎಸ್ ಮುಖಂಡರಾದ ವಿಶ್ವಜಿತ್, ಸಿಎಂಆರ್ ಹರೀಶ್ ಇತರರು ಹಾಜರಿದ್ದರು.

ಇಂದು ವಿಶೇಷ ಪೂಜೆ: ಗೋವಿಂದರಾಜು ಬೆಂಬಲಿಗರು ಜೂ.23ರಂದು ಕೊಂಡರಾಜನಹಳ್ಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಗೋವಿಂದರಾಜು ಬೆಳಗ್ಗೆ 8.45ಕ್ಕೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಶಾಸಕ ಕೆ.ಶ್ರೀನಿವಾಸಗೌಡರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net