ನದಿ ತೀರಕ್ಕೆ ಶಾಸಕ ಭೇಟಿ

MLA's visit to the river bank
ಮಹಾಲಿಂಗಪುರ ಸಮೀಪದ ಪ್ರವಾಹ ಪೀಡಿತ ನಂದಗಾಂವ ಗ್ರಾಮಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಶೀಲಿಸಿದರು.ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ,ವೆಂಕಟೇಶ ಬೆಳಗಲ್ ಇದ್ದರು.
Published on

ಮಹಾಲಿಂಗಪುರ: ಸಮೀಪದ ಘಟಪ್ರಭ ನದಿ ಕಳೆದ ನಾಲ್ಕಾರು ದಿನದಿಂದ ತುಂಬಿ ಹರಿಯುತ್ತಿದ್ದು ಢವಳೇಸ್ವರ, ಅವರಾದಿ ಮತ್ತು ಮಿರ್ಜಿ ಸೇತುವೆಗಳು ಜಲಾವತವಾಗಿದ್ದರಿಂದ ನದಿಯಾಚೆಗಿನ ಮುಧೋಳ, ಮೂಡಲಗಿ ತಾಲೂಕಿನ ಹತ್ತಾರು ಹಳ್ಳಿಗಳು ಮಹಾಲಿಂಗಪುರ ಪಟ್ಟಣದ ಸಂಪರ್ಕ ಕಳೆದುಕೊಂಡಿವೆ.

ನದಿಯಾಚೆಗಿನ ಅವರಾದಿ, ಅರಳಿಮಟ್ಟಿ, ಢವಳೇಶ್ವರ, ಬೀಸನಕೊಪ್ಪ, ವೆಂಕಟಾಪುರ, ಯರಗುದ್ರಿ, ಮಿರ್ಜಿ ಗ್ರಾಮಗಳ ವಿದ್ಯಾರ್ಥಿಗಳು ಮಹಾಲಿಂಗಪುರ ಕಾಲೇಜುಗಳಿಗೆ ಗೈರು ಹಾಜರಾಗಿದ್ದಾರೆ. ವರ್ತಕರು ಮತ್ತು ರೈತರು ಪರದಾಡುವಂತಾಗಿದೆ. ನದಿಯ ತಟದಲ್ಲಿನ ಗ್ರಾಮಗಳಿಗೆ ಪ್ರವಾಹ ಭೀತಿ ಕಾಡುತ್ತಿದೆ.

ನದಿ ತೀರಕ್ಕೆ ಶಾಸಕ ಭೇಟಿ

ಶಾಸಕ ಸಿದ್ದು ಸವದಿ ಅಕಾರಿಗಳ ತಂಡದೊಂದಿಗೆ ಘಟಪ್ರಭ ನದಿ ತೀರದ ನಂದಗಾಂವ ಮತ್ತು ಢವಳೇಶ್ವರ ಗ್ರಾಮಕ್ಕೆ ಭೇಟಿ ನೀಡಿದರು. ಸಧ್ಯಕ್ಕೆ ಹರಿಯುವ ನೀರಿನ ಪ್ರಮಾಣ ನೋಡಿದರೆ ಅಂಥ ಗಂಡಾಂತರವೇನೂ ಇಲ್ಲ. ಗಂಜಿ (ಕಾಳಜಿ) ಕೇಂದ್ರ ತೆರೆಯುವಷ್ಟು ಪರಿಸ್ಥಿತಿಯೇನೂ ಇಲ್ಲ. ಆದಾಗ್ಯೂ ಮುಂದೆ ಬರಬಹುದಾದ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ಸಿದ್ದತೆ ನಡೆಸಿದ್ದೇವೆ.

ನದಿಪಾತ್ರದ ಪರಿವಾರಗಳು ಆದಷ್ಟು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದರು. ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ,ಜಿಎಲ್‌ಬಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶ ಬೆಳಗಲ್,ಮಲ್ಲಪ್ಪ ಗುರವ, ವಿನೋದ ಪಾಟೀಲ, ವೆಂಕಣ್ಣ ಗೊಬ್ಬರದ ಸೇರಿದಂತೆ ಸ್ಥಳಿಯರು ಹಾಗೂ ಅಕಾರಿವರ್ಗದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net