ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕರಿಗೆ ಒತ್ತಾಯ

30 ckm 3
ಚಿಕ್ಕಮಗಳೂರು ಶಾಸಕ ಎಚ್.ಡಿ.ಯಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದ ಹಿರೇಮಗಳೂರು ಗ್ರಾಮಸ್ಥರು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು. ಎಚ್.ಎಸ್.ಜಗದೀಶ್, ಹಿರೇಮಗಳೂರು ರಾಮಚಂದ್ರ, ಎಚ್.ಆರ್.ಚಂದ್ರಪ್ಪ, ಎಚ್.ಎಂ.ಯೋಗೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಿರೇಮಗಳೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ನಿವಾಸಿಗಳು ಮುಖಂಡರಾದ ಎಚ್.ಎಸ್.ಜಗದೀಶ್ ಹಾಗೂ ಹಿರೇಮಗಳೂರು ರಾಮಚಂದ್ರ ನೇತೃತ್ವದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ನಿವಾಸಿಗಳು ನಗರಸಭಾ ವ್ಯಾಪ್ತಿಯ ಹಿರೇಮಗಳೂರು ವಾರ್ಡ್ಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ಒಳಚರಂಡಿ ಅಳವಡಿಕೆ, ರಸ್ತೆ, ಬೀದಿದೀಪ, ಶುಚಿತ್ವ, ಸಾರ್ವಜನಿಕ ಆಟದ ಮೈದಾನ, ವ್ಯಾಯಾಮ ಶಾಲೆ ಅವಶ್ಯಕತೆಯಿದೆ ಎಂದರು.
ಶರೀರಕ್ಕೆ ಬಹಳಷ್ಟು ಅವಶ್ಯಕತೆಯಿರುವ ಕುಡಿಯುವ ನೀರಿಗೆ ಮೊದಲ ಪ್ರಾಧಾನ್ಯತೆ ನೀಡುವ ಜೊತೆಗೆ ಮೂಲಸೌಕರ್ಯ ಹಾಗೂ ಯುವಕರಿಗೆ ಶಾರೀರಿಕವಾಗಿ ಆರೋಗ್ಯ ದೃಷ್ಟಿಯಿಂದ ವ್ಯಾಯಾಮ ಶಾಲೆ ಆರಂಭಿಸಬೇಕು ಎಂದು ಹೇಳಿದರು.
ಈ ಬಗ್ಗೆ ಶಾಸಕರು ಸ್ಥಳದಲ್ಲೇ ನಗರಸಭೆ ಆಯುಕ್ತರಿಗೆ ಕರೆಮಾಡಿ ಕೂಡಲೇ ಹಿರೇಮಗಳೂರು ಗ್ರಾಮಕ್ಕೆ ತೆರಳಿ ಸಮೀಕ್ಷೆ ನಡೆಸುವ ಮುಖಾಂತರ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಹೀಗಾಗಿ ಶಾಸಕರು ತವರು ಗ್ರಾಮದ ಹಿರೇಮಗಳೂರಿಗೆ ಹೆಚ್ಚಿನ ಆದ್ಯತೆ ನೀಡಿ ವಿಶೇಷವಾಗಿ ಶಾಸಕರ ಮಾದರಿ ಗ್ರಾಮವನ್ನಾಗಿ ಮಾರ್ಪಡಿಸಿ ಅಭಿವೃದ್ಧಿಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ನಿವಾಸಿಗಳಾದ ಎಚ್.ಆರ್.ಚಂದ್ರಪ್ಪ, ಎಚ್.ಎಂ.ಯೋಗಿಶ್, ವಸಂತ್ ಕುಮಾರ್, ಮೊಗಣ್ಣ, ಪರಮೇಶ್ವರ್, ಸಂಜಯ್, ವಕೀಲ ರಮೇಶ್, ಶಿವಣ್ಣ, ವೆಂಕಟೇಶ್, ಚಂದ್ರಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net