

ಶ್ರೀನಿವಾಸಪುರ: ಮಾಜಿ ಶಾಸಕ ರಮೇಶ್ಕುಮಾರ್ ವಿರುದ್ಧ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಆರೋಪ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ ಹೇಳಿದರು.
ಪಟ್ಟಣದ ನಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ಕುಮಾರ್ ಅವರು ಶಾಸಕರಿದ್ದ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗಲೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದರು ಎಂದರು.
ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತರಲು ನಿಮಗೆ ಯೋಗ್ಯತೆ ಇಲ್ಲ. ನೀವು ಕಮೀಷನ್ಗಾಗಿ ಅಧಿಕಾರಿಗಳನ್ನು ಪೀಡಿಸುತ್ತಿರಾ, ಆದ್ದರಿಂದ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ. ನೀವು ಅಧಿಕಾರಿಗಳ ಬಳಿ ಕಮೀಷನ್ ಪಡಿಯುತ್ತಿದ್ದೀರಾ, ಪಡಿಯುತ್ತಿಲ್ಲವಾ ಎಂದು ಪ್ರಮಾಣ ಮಾಡಿ ನೋಡೋಣ ಎಂದು ಸವಾಲು ಹಾಕಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ, ಇತ್ತೀಚಿಗೆ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಮಾತಿನ ಬರದಲ್ಲಿ ಮಾಜಿ ಶಾಸಕರು ಕ್ಷೇತ್ರ ಅಭಿವದ್ಧಿ ಅಡ್ಡಿಪಡಿಸುತ್ತಿದ್ದಾರೆಂದು ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಎಷ್ಟು ಸರಿ?. ಮಾಜಿ ಶಾಸಕರು ಈ ಭಾಗದಲ್ಲಿ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ, ಕಾನ್ಸರ್ ಆಸ್ಪತ್ರೆ ತೆರೆಯಬೇಕು ಎನ್ನುವ ಜನರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದರು ಆಗ ಅಡ್ಡಪಡಿಸಿರುವುದು ನಿಮ್ಮ ಅನುಯಾಯಿಗಳಲ್ಲವೆ ಎಂದು ಪ್ರಶ್ನಿಸಿದರು.
ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ ಮಾತನಾಡಿ, ರಮೇಶ್ಕುಮಾರ್ ಅವರು ಕ್ಷೇತ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಅನೇಕ ಬಾರಿ ನಿಮ್ಮ ಅನುಯಾಯಿಗಳಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಟೀಕಿಸಿದರು.
ನಾಮಿನಿ ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಮನೋಹರ್, ಸದಸ್ಯರಾದ ಶಂಕರ್, ಬಿ.ಎಲ್.ವೆಂಕಟರೆಡ್ಡಿ, ಮುಖಂಡರಾದ ಸಿ.ಮುನಿಸ್ವಾಮಿ, ವಿಶ್ವನಾಥರೆಡ್ಡಿ, ದೊರಸ್ವಾಮಿರೆಡ್ಡಿ, ಚಲ್ದಿಗಾನಹಳ್ಳಿ ಈರಪ್ಪ, ಗೋವಿಂದರೆಡ್ಡಿ, ಚಾಕಪಲ್ಲಿ ರಘು, ಮುನಿರಾಜು, ವೆಂಕಟೇಶ್, ಚಲಪತಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇತುಗಾನಹಳ್ಳಿ ನಾಗರಾಜ್, ಅಂಬೇಡ್ಕರ್ ಪಾಳ್ಯದ ಶಿವಕುಮಾರ್, ನಾಗರಾಜ್, ಶಿವಪ್ರಸಾದ್, ನಿರಂಜನ್, ಡಾ.ವೆಂಕಟೇಶ್, ಸೋಮರಾಜು, ಅಪ್ಪೂರ್ ವೆಂಕಟೇಶ್, ಬಾಬು ಇದ್ದರು.