

ಆನೇಕಲ್ : ಕಳೆದ ವಾರ ಬಿದ್ದ ಮಳೆಗೆ ಪೈನಿಯರ್ ಬಡಾವಣೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಸಾರ್ವಜನಿಕರಿಗೆ ಎದುರಾದ ಸಮಸ್ಯೆಯ ಬಗ್ಗೆ ಸ್ಥಳಿಯರು ಶಾಸಕರ ಗಮನ ಸೆಳೆದಿದ್ದು, ತಕ್ಷಣ ಸರ್ಕಾರದಿಂದ 80 ಲ ರೂ. ಬಿಡುಗಡೆಗೊಳಿಸಿ ತಡೆಗೋಡೆ ಹಾಗೂ ಚರಂಡಿ ಕಾಮಗಾರಿಗೆ ನೆರವು ನೀಡಿದರು ಎಂದು ಕಾಂಗ್ರೆಸ್ ಮುಖಂಡ ಟ್ಟಹಳ್ಳಿ ಸೀನಪ್ಪ ಹೇಳಿದರು. ತಾಲೂಕಿನ ಟ್ಟಹಳ್ಳಿಯಲ್ಲಿ ಶಾಸಕ ಬಿ.ಶಿವಣ್ಣ ವಿಶೇಷ ಅನುದಾನದಲ್ಲಿ 80 ಲ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳಿಯರ ಸಮಸ್ಯೆ ಅರಿತುಕೊಂಡು ತಕ್ಷಣವೇ ಕಾಮಗಾರಿ ನಡೆಸಲು ಅನುವು ಮಾಡಿಕೊಡುವ ಮೂಲಕ ಶಾಸಕರು ಜನಪರ ಕಾಳಜಿ ಮೆರೆದಿದ್ದಾರೆ ಎಂದರು.
ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯ ಬೊಮ್ಮಸಂದ್ರ ಲಿಂಗಣ್ಣ ಮಾತನಾಡಿ, ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ಮಳೆ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಶಾಸಕರು ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಸಿದ್ಧರಾಗಿದ್ದಾರೆ. ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ. ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದರು. ಮುಖಂಡರಾದ ಮಂಜುನಾಥ್, ರಾಯಸಂದ್ರ ವೆಂಕಟೇಶ್, ವಕೀಲರಾದ ಪ್ರದಿಪ್, ಮದ್ದೂರಪ್ಪ, ರಾಜು, ವೆಂಕಟೇಶ್, ಪೈನಿಯರ್ ಬಡಾವಣೆಯ ವಿನಯ್ ಗೌಡ, ಭಾಸ್ಕರ್, ಹೇಮಾ ಮತ್ತು ಗ್ರಾಮಸ್ಥರು, ಬಡಾವಣೆಯ ನಿವಾಸಿಗಳು ಇದ್ದರು.