ಸ್ವಾತಂತ್ರ್ಯ ದಿನದಂದು ಶಾಸಕರಿಂದ ಮಕ್ಕಳಿಗೆ ಸಿಹಿ ವಿತರಣೆ

12 KRN-1
ಕೆ.ಆರ್.ನಗರ ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಸ್ವಾತಂತ್ರೊೃೀತ್ಸವ ದಿನದ ಅಂಗವಾಗಿ ಶಾಸಕ ಡಿ.ರವಿಶಂಕರ್ ವಿದ್ಯಾರ್ಥಿಗಳಿಗೆ ನೀಡಿದ್ದ ಸಿಹಿಯನ್ನು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಶಿಕ್ಷಕರಿಗೆ ವಿತರಿಸಿದರು. ಆರ್.ಕೃಷ್ಣಪ್ಪ, ಸ್ವಾಮಿಗೌಡ, ಬ್ಲಾಕ್ ಎಂ.ಎಸ್.ಮಹದೇವ್, ಉದಯಶಂಕರ್, ಎಂ.ಜೆ.ರಮೇಶ್, ಸೈಯದ್ ಜಾಬೀರ್, ಶಿಕ್ಷಣ ಸಂಯೋಜಕ ದಾಸಪ್ಪ ಇದ್ದರು.
Published on

ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವ್ಯಾಪ್ತಿಯ ಪದವಿ ಪೂರ್ವ ಕಾಲೇಜು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ ಮತ್ತು ಅಂಗನವಾಡಿ ಮಕ್ಕಳು ಸೇರಿದಂತೆ 43 ವಿದ್ಯಾರ್ಥಿಗಳಿಗೆ ಶಾಸಕ ಡಿ.ರವಿಶಂಕರ್ ವೈಯಕ್ತಿಕವಾಗಿ ಸ್ವಾತಂತ್ರ್ಯ ದಿನದ ಅಂಗವಾಗಿ ಸಿಹಿ ತಿಂಡಿ ವಿತರಿಸಲಿದ್ದಾರೆ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಮಾಹಿತಿ ನೀಡಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಶಾಸಕರು ನೀಡಿದ್ದ ಸಿಹಿ ತಿನಿಸುಗಳ ಬಾಕ್ಸ್‌ಗಳನ್ನು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸಿ ಮಾತನಾಡಿ, ಕಳೆದ ವರ್ಷದಿಂದ ಮಕ್ಕಳಿಗೆ ಸಿಹಿ ನೀಡುತ್ತಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದರು.

ಬುಧವಾರ 10 ಕ್ಲಸ್ಟರ್‌ಗಳ ಶಿಕ್ಷಕರಿಗೆ ಸಿಹಿ ತಿಂಡಿಗಳ ಬಾಕ್ಸ್ ವಿತರಣೆ ಮಾಡಿದ್ದು, ಗುರುವಾರ ಉಳಿದ 11 ಕ್ಲಸ್ಟರ್‌ಗಳಿಗೆ ಕೊಡಲಿದ್ದು, ಶಿಕ್ಷಕರು ಬಿಇಒ ಮತ್ತು ಸಿಆರ್ ಪಿಗಳನ್ನು ಸಂಪರ್ಕಿಸಿ ಶಾಲೆಗಳಿಗೆ ಸಿಹಿ ಕೊಂಡೊಯ್ಯಬಹುದು ಎಂದು ಮಾಹಿತಿ ನೀಡಿದರು.

ಬಿಇಒ ಆರ್.ಕೃಷ್ಣಪ್ಪ, ಅಕ್ಷರ ದಾಸೋಹ ನಿರ್ದೇಶಕ ಸ್ವಾಮಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಶಿಕ್ಷಣ ಸಂಯೋಜಕ ದಾಸಪ್ಪ, ಸಿಆರ್‌ಪಿ ಹರಿಪ್ರಸಾದ್, ಕಲ್ಯಾಣಪುರ ಶಾಲೆಯ ಮುಖ್ಯಶಿಕ್ಷಕ ಡಿ.ವಿ.ಗುಡಿ ಪ್ರಸನ್ನ ಸೇರಿದಂತೆ ಶಾಲಾ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net