ಪೊಲೀಸ್ ಇಲಾಖೆಗೆ ವಾಹನ ಹಸ್ತಾಂತರ

CTD MLA T.RAGUMURTY-------------
Published on

ಚಿತ್ರದುರ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬುಲೆರೋ ನಿಯೋ ವಾಹನವನ್ನು ಪೊಲೀಸ್ ಇಲಾಖೆಗೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹಸ್ತಾಂತರಿಸಿದರು.

2024-25ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂದಾಜು 11.7 ಲಕ್ಷ ರೂ. ಮೌಲ್ಯದ ಒಂದು ವಾಹನವನ್ನು ಇಲಾಖೆಗೆ ಶಾಸಕರು ಮಂಜೂರು ಮಾಡಿದ್ದರು.

ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್ಪಿಗಳಾದ ಪಿ.ಕೆ. ದಿನಕರ್, ರಾಜಣ್ಣ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶಶಿಕುಮಾರ್, ತಿಮ್ಮಣ್ಣ, ಮುತ್ತುರಾಜ್, ಉಮೇಶ್ ಮತ್ತಿತರರು ಇದ್ದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರು ಮಾಡಿದ್ದ ಹೊಸ ವಾಹನವನ್ನು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಬುಧವಾರ ಚಿತ್ರದುರ್ಗದಲ್ಲಿ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರಿಗೆ ಹಸ್ತಾಂತರಿಸಿದರು. ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಇತರರು ಇದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net