

ಕಡೂರು: ತಾಲೂಕು ನೊಳಂಬ ಲಿಂಗಾಯಿತ ಸಮಾಜದಿಂದ ಶಾಸಕ ಕೆ.ಎಸ್.ಆನಂದ್ ಮತ್ತು ನೂತನ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಸೆ.1ರಂದು ಹಮ್ಮಿಕೊಳ್ಳಲಾಗಿದೆ ಎಂದು ಸನ್ಮಾನ ಸಮಿತಿ ಅಧ್ಯಕ್ಷ ಕೆ.ಎಸ್.ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ನೊಳಂಬ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೆ.1ರಂದು ತಾಲೂಕಿನ ಗೆದ್ಲೇಹಳ್ಳಿ ಸಮೀಪದ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುಷ್ಪಗಿರಿ ಮಠದ ಶ್ರೀ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ. ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ ಎಂದರು.
ಸನ್ಮಾನ ಸಮಿತಿ ಕಾರ್ಯದರ್ಶಿ ಗುಮ್ಮನಹಳ್ಳಿ ಅಶೋಕ್, ಮುಖಂಡರಾದ ಬಳ್ಳೇಕೆರೆ ವಿಶ್ವನಾಥ್, ಬಿಸಲೆರೆ ಕೆೆಂಪರಾಜು, ಸವಿತಾ ಪಾಟೀಲ್, ನಂದೀಶ್ ಬಾಬು, ಎಲ್.ಎಂ.ಪರಮೇಶ್ವರಪ್ಪ, ರಾಜಪ್ಪ, ಗೆದ್ಲೆಹಳ್ಳಿ ಓಂಕಾರ್, ಬಸವರಾಜಪ್ಪ, ಡಿ.ಕೆ.ಶಿವಕುಮಾರ್, ಸೋಮಶೇಖರ್ ಮತ್ತಿತರಿದ್ದರು.