ಬಾಳುಸಿಂಗ್​ ಕುಟುಂಬಸ್ಥರಿಗೆ ಶಾಸಕ ಯತ್ನಾಳ ಸಾಂತ್ವನ

MLA Yatna's condolences to Balusingh's family
ತಾಳಿಕೋಟಿ ಪಟ್ಟಣದಲ್ಲಿ ಇತ್ತೀಚೆಗೆ ನಿಧನರಾದ ಜನಸಂದ ಹಿರಿಯ ಮುಖಂಡ ಬಾಳುಸಿಂಗ್​ ವಿಜಾಪುರ ಅವರ ಮನೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಹರಿಸಿಂಗ್​ ಮೂಲಿಮನಿ, ಸುರೇಶ ಹಜೇರಿ ಮತ್ತಿತರರಿದ್ದಾರೆ.
Published on

ವಿಜಯಪುರ : ತಾಳಿಕೋಟೆ ಪಟ್ಟಣದಲ್ಲಿ ಇತ್ತೀಚೆಗೆ ನಿಧನರಾದ ಜನಸಂದ ಹಿರಿಯ ಮುಖಂಡ ಬಾಳುಸಿಂಗ್​ ರಾಮಸಿಂಗ್​ ವಿಜಾಪುರ ಅವರ ಮನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಾಳುಸಿಂಗ್​ ಜನಸಂದ ಕಾಲದಿಂದಲೂ ಬಿಜೆಪಿ ಸಂಟನೆಗೆ ಸಾಕಷ್ಟು ಶ್ರಮಿಸಿದ್ದರು. ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟ ನೆನಪಿಸಿಕೊಂಡು ಕುಟುಂಬದವರೊಂದಿಗೆ ಹಂಚಿಕೊಂಡರು. ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದರು.

ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್​ ಮೂಲಿಮನಿ, ಸುರೇಶ ಹಜೇರಿ, ರತನಸಿಂಗ್​ ಕೊಕಟನೂರ, ರಮೇಶ ಗೌಡಗೇರಿ, ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net