ಶಾಸಕ ಯತ್ನಾಳ ಕರೆತರಲು ಪ್ರಯತ್ನ: ರಮೇಶ ಜಾರಕಿಹೊಳಿ

Ramesh Jarkiholi
Published on

ಬೆಳಗಾವಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾಂತ್ರಿಕವಾಗಿ ಬಿಜೆಪಿಯಿಂದ ಉಚ್ಚಾಟನೆ ಆಗಿರಬಹುದು. ಅವರು ಈಗಲೂ ನಮ್ಮ ತಂಡದಲ್ಲಿದ್ದು, ಮರಳಿ ಪಕ್ಷಕ್ಕೆ ಕರೆತರುತ್ತೇವೆ. ಅವರು ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ನಾಯಕರ ಬಗ್ಗೆ ಟೀಕೆ ಟಿಪ್ಪಣೆ ಮಾಡದಂತೆ ಯತ್ನಾಳ ಅವರಲ್ಲಿ ಮನವಿ ಮಾಡಿದ್ದೇವೆ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡದಂತೆ ಮನವರಿಕೆ ಮಾಡಿದ್ದೇನೆ. ಆದರೂ, ಟೀಕಿ& ಟಿಪ್ಪಣೆ ಮುಂದುವರಿಸಿರುವುದು ಸರಿಯಲ್ಲ ಎಂದರು.

"ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಲಿಂಗಾಯತ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳಿಗೆ ಒಬಿಸಿ, ಎಸ್​ಸಿ, ಎಸ್​ಟಿ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ' ಎಂಬ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆ ನಾನು ಒಪ್ಪುವುದಿಲ್ಲ. ಒಬಿಸಿ ಮೀಸಲಾತಿ ಕೇವಲ ಕರ್ನಾಟಕ ಅಷ್ಟೇ ಅಲ್ಲ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಪಕ್ಷಾತಿತವಾಗಿ ಚರ್ಚಿಸಿ ಒಮ್ಮತದ ರ್ನಿಣಯ ಕೈಗೊಳ್ಳುವ ಅವಶ್ಯವಿದೆ. ಹೀಗಾಗಿ ತಕ್ಷಣ ಆತುರದ ರ್ನಿಣಯ ಕೈಗೊಳ್ಳಬೇಡಿ ಎಂದು ಗೃಹ ಸಚಿವ ಅಮಿತ್​ ಷಾ ಅವರು ಹೇಳಿದ್ದರು. ಆದರೆ, ಆ ವಿಷಯವನ್ನು ತಪ್ಪಾಗಿ ಅರ್ಥೈಯಿಸಿಕೊಂಡು ಯತ್ನಾಳ ಅವರು ಮಾತನಾಡಿರುವುದು ಸರಿಯಲ್ಲ ಎಂದರು.

ಯತ್ನಾಳ ಅವರ ಉಚ್ಚಾಟನೆ ರದ್ದುಪಡಿಸಿ ಮರಳಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ನಾಯಕರೊಂದಿಗೆ ಚರ್ಚಿಸುತ್ತಿದ್ದೇವೆ. ಅಲ್ಲಿಯವರೆಗೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡದಂತೆ, ಯಾರನ್ನೂ ವೈಯಕ್ತಿಕವಾಗಿ ನಿಂದಿಸಬಾರದೆಂದು ಮಾಧ್ಯಮದ ಮೂಲಕ ಮತ್ತೊಮ್ಮೆ ವಿನಂತಿಸುತ್ತಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net