ಅತಿವೃಷ್ಠಿಯಿಂದ ಅಪಾರ ಹಾನಿ, ಸಮೀಕ್ಷೆ ನಡೆಸಿ ತ್ವರಿತ ಪರಿಹಾರ ಕಲ್ಪಿಸಿ, ಸರ್ಕಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಪತ್ರ

YASHAVANTRAYAGOUDA PATIL
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಅತಿವೃಷ್ಠಿಯಿಂದಾಗಿ ಉಂಟಾಗಿರುವ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಸಂಬಂಧಿಸಿದ ಸಚಿವರುಗಳಿಗೆ ಪತ್ರ ಬರೆದಿದ್ದಾರೆ.

ಇಂಡಿ ತಾಲ್ಲೂಕಿನಲ್ಲಿ ಅತಿವೃಷ್ಠಿಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಬೆಳೆ ನಷ್ಟ ಉಂಟಾಗಿದ್ದು, ಕೂಡಲೇ ಬೆಳೆನಷ್ಟದ ಸಮೀಕ್ಷೆ ನಡೆಸಿ, ಬೆಳೆ ನಷ್ಟದ ಪರಿಹಾರದ ಜೊತೆಗೆ ಸಾರ್ವಜನಿಕ ರಸ್ತೆಗಳು, ಸೇತುವೆ, ಕಟ್ಟಡಗಳು, ವಿದ್ಯುತ್ ಕಂಬ, ವಿದ್ಯುತ್ ತಂತಿಗಳ ದುರಸ್ಥಿ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಯು ವಾಡಿಕೆಗಿಂತ 3 ಪಟ್ಟು ಹೆಚ್ಚಾಗಿದ್ದು, ಅತೀವೃಷ್ಠಿಯ ಪರಿಣಾಮದಿಂದಾಗಿ ಕೃಷಿ ಇಲಾಖೆಯ ತೊಗರಿ, ಮೆಕ್ಕೆಜೋಳ, ಕಬ್ಬು, ಹತ್ತಿ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಉದ್ದು, ಹೆಸರು, ಜೋಳ ಮೊದಲಾದ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಾದ ಲಿಂಬೆ, ಪಪ್ಪಾಯ, ದಾಳಿಂಬೆ, ದ್ರಾಕ್ಷಿ, ಬಾಳೆ, ನುಗ್ಗೆ, ಕರಬೂಜ, ಸಪೋಟ, ಕಲ್ಲಂಗಡಿ, ಈರುಳ್ಳಿ, ಮೆಣಸಿನಕಾಯಿ, ಟೊಮಾಟೋ ಮತ್ತಿತರ ಬಹುವಾರ್ಷಿಕ ಬೆಳೆಗಳು ಬೆಳೆದ ರೈತರು ಬೆಳೆ ನಷ್ಟ ಹೊಂದಿದ್ದಾರೆ. ಆದಕಾರಣ ರೈತರು ಕಷ್ಟಪಟ್ಟು ಸಾಲ-ಸೂಲ ಮಾಡಿ ಬೆಳೆದ ಬೆಳೆಗೆ ಖರ್ಚು ಮಾಡಿದ ಹಣ ಬಾರದೇ ತೀವ್ರ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಾರಣ ರಾಜ್ಯ ಸರ್ಕಾರವು ಈ ಸಂಕಷ್ಟ ಸಮಯದಲ್ಲಿ ರೈತರ ನೆರವಿಗೆ ಬರುವುದು ಅತಿ ಅವಶ್ಯಕವಾಗಿದೆ. ಅಲ್ಲದೇ ಇಂಡಿ ತಾಲ್ಲೂಕಿನ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಗ್ರಾಮೀಣ ರಸ್ತೆಗಳು, ಸೇತುವೆ, ಮನೆಗಳು, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು, ವಿದ್ಯುತ್ ಕಂಬ ಮತ್ತು ತಂತಿಗಳು ಮೊದಲಾದ ದುರಸ್ಥಿ ಕಾಮಗಾರಿ ಕೈಗೊಳ್ಳುವುದು ಸಾರ್ವಜನಿಕರ ಹಿತದೃಷ್ಠಿಯಿಂದ ಅತೀ ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದುವರಿದು ಸೇತುವೆ, ಮನೆಗಳು, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು, ವಿದ್ಯುತ್ ಕಂಬ ಮತ್ತು ತಂತಿಗಳು ಮೊದಲಾದ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಯಶವಂತರಾಯಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net