ಮೂಲ ಸೌಲಭ್ಯ ಒದಗಿಸಲು ಪ್ರಸ್ತಾವನೆ ಸಲ್ಲಿಸಿ...

Yashpal
Published on

ಅಧಿಕಾರಿಗಳಿಗೆ ಯಶ್​ಪಾಲ್​ ಸುವರ್ಣ ಸೂಚನೆ

ಉಡುಪಿಯ ಹೈ-ಟೆಕ್​ ಫಿಶ್​ ಮಾರ್ಕೆಟ್​ಗೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿರುವ ಹೈ-ಟೆಕ್​ ಫಿಶ್​ ಮಾರ್ಕೆಟ್​ಗೆ ಅಗತ್ಯವಿರುವ ಎಲ್ಲ ಸೌಲಭ್ಯ-ಸೌಕರ್ಯ ನೀಡಲು ತಕ್ಷಣವೇ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭಾ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚನೆ ನೀಡಿದರು.

ಉಡುಪಿಯಲ್ಲಿರುವ ಹೈ-ಟೆಕ್​ ಮೀನು ಮಾರುಕಟ್ಟೆಗೆ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಅಧಿಕಾರಿಗಳೊಡನೆ ಜುಲೈ 3ರಂದು ಭೇಟಿ ನೀಡಿ ಪರಿಶೀಲಿಸಿ, ಮಾತನಾಡಿದರು.

ಕ್ಯಾಮರಾ ಅಳವಡಿಸಿ

MLA
ಮೀನು ಮಾರಾಟ ಮಹಿಳೆಯರು ಮಾತನಾಡಿ, ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಂಪರ್ಕ, ಬಾವಿಗೆ ಆವರಣ ಗೋಡೆ, ಮೀನುಗಾರ ಮಹಿಳೆಯರ ಅನುಕೂಲಕ್ಕಾಗಿ ಡ್ರೆಸ್ಸಿಂಗ್​ ರೂಮ್​, ವಿಶ್ರಾಂತಿ ಕೊಠಡಿ, ಸೋಲಾರ್​ ವಿದ್ಯುತ್​ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಶಾಸಕ ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಮೀನು ಮಾರಾಟ ಮಹಿಳೆಯರ ಬೇಡಿಕೆಗೆ ಸ್ಪಂದಿಸಿದ ಶಾಸಕ ಯಶ್​ಪಾಲ್​, ನಗರದ ಕೇಂದ್ರ ಭಾಗದಲ್ಲಿರುವ ಮೀನು ಮಾರುಕಟ್ಟೆಗೆ ಮೂಲ ಸೌಕರ್ಯ ನೀಡಲು ಹಾಗೂ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗುವುದು. ನಗರಸಭೆ ಮೂಲಕ ಮೀನು ಮಾರಾಟಗಾರರು ಹಾಗೂ ಗ್ರಾಹಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ಉಡುಪಿ ತಾಲೂಕು ಹಸಿ ಮೀನು ಮಾರಾಟಗಾರ ಸಂಘದ ಅಧ್ಯಕ್ಷೆ ಬೇಬಿ ಎಚ್​. ಸಾಲ್ಯಾನ್​, ನಗರಸಭಾ ಸದಸ್ಯೆ ಮಾನಸಾ ಸಿ. ಪೈ, ಪೌರಾಯುಕ್ತ ಮಹಾಂತೇಶ ಹಂಗರಗಿ, ಅಧಿಕಾರಿಗಳಾದ ರವಿ ಪ್ರಕಾಶ್​, ಕಾರ್ತಿಕ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net