ಕೊರಗ ಸಮುದಾಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ

Yashpal 1
Published on

ಶಾಸಕ ಯಶ್​ಪಾಲ್​ ಸುವರ್ಣ ಹೇಳಿಕೆ

ಎಂಪಿಸಿ ಕಾಮಗಾರಿಗೆ ಶಿಲಾನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಬಿಜೆಪಿ ಸರ್ಕಾರವು ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಳ್ತೂರು ಗ್ರಾಮಕ್ಕೆ 1.20 ಕೋಟಿ ರೂ. ವೆಚ್ಚದಲ್ಲಿ ಎರಡು ಮಲ್ಟಿ ಪರ್ಪಸ್​ ಸೆಂಟರ್​ (ಎಂಪಿಸಿ) ಮಂಜೂರು ಮಾಡಿದೆ. ಬಹೂಪಯೋಗಿ ಈ ಭವನದಿಂದ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿ ತಾಲೂಕಿನ ಕಳ್ತೂರು ಗ್ರಾಪಂ ವ್ಯಾಪ್ತಿಯ ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆಯಲ್ಲಿರುವ ಕೊರಗರ ಕಾಲನಿಯಲ್ಲಿ ನಿರ್ಮಾಣಗೊಳ್ಳಲಿರುವ ಎಂಪಿಸಿ ಕಾಮಗಾರಿಗೆ ಸೆ.23ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

Yashpal 2
ಕಳ್ತೂರು ಗ್ರಾಪಂ ಅಧ್ಯಕ್ಷ ನವೀನಕುಮಾರ್​, ಉಪಾಧ್ಯಕ್ಷ ರಮಾನಂದ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್​, ಆದರ್ಶ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ನಾಗೇಶ ನಾಯ್ಕ, ಉಷಾ ಪೂಜಾರಿ, ಸುಕನ್ಯಾ ಶೆಟ್ಟಿ, ಪಿಡಿಒ ಸವಿತಾ, ಸ್ಥಳೀಯರಾದ ಹರೀಶ ಶೆಟ್ಟಿ, ಸತೀಶ ಶೆಟ್ಟಿ, ಶೇಖರ ಕಲ್ಲುಗುಡ್ಡೆ, ಗೌರಿ ಕಲ್ಲುಗುಡ್ಡೆ, ಮನೋಜ ಶೆಟ್ಟಿ, ವಿನುತ್​ ಶೆಟ್ಟಿ, ನವೀನ ಪುತ್ರನ್​, ಅಜಿತ ಹೆಗ್ಡೆ, ದಿವಾಕರ ಕಳ್ತೂರು, ರವೀಂದ್ರ ಪೂಜಾರಿ, ಅಶೋಕ ಶೆಟ್ಟಿ, ಸದಾನಂದ ಪೂಜಾರಿ, ಸುಂದರ ಶೆಟ್ಟಿ ಹಾಗೂ ಕೊರಗ ಸಮುದಾಯದವರು ಇದ್ದರು.

ಬುಕ್ಕಿಗುಡ್ಡೆ ಮತ್ತು ಕಲ್ಲುಗುಡ್ಡೆಯಲ್ಲಿ ತಲಾ 60 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮುದಾಯ ಭವನ, ಆರೋಗ್ಯ ಉಪಕೇಂದ್ರ, ಗ್ರಂಥಾಲಯ ನಿರ್ಮಾಣಗೊಳ್ಳಲಿದೆ. ಈ ಬಹೂಪಯೋಗಿ ಕಟ್ಟಡಗಳು ಕೊರಗ ಸಮುದಾಯ ಮುಖ್ಯವಾಹಿನಿಗೆ ಬರಲು ಅನುಕೂಲ ಆಗಲಿದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net