ಜನರ ಅನುಕೂಲತೆಗೆ ಸುಸಜ್ಜಿತ ಮಾರುಕಟ್ಟೆ ಶೀಘ್ರ...

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

ಪರ್ಕಳದಲ್ಲಿ ಸಂಕೀರ್ಣ ನಿರ್ಮಾಣಕ್ಕೆ ಶಿಲಾನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಕಳದಲ್ಲಿ ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ತರಕಾರಿ, ಮೀನು, ಮಾಂಸ, ನಿತ್ಯದ ಬಳಕೆಯ ದಿನಸಿ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳು ಒಳಗೊಳ್ಳಲಿದೆ. ಪಾರ್ಕಿಂಗ್​ ವ್ಯವಸ್ಥೆಯೊಂದಿಗೆ ಸುಸಜ್ಜಿತ ಮಾರುಕಟ್ಟೆ ಶೀಘ್ರದಲ್ಲೇ ನಿರ್ಮಾಣಗೊಂಡು ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿ ನಗರಸಭೆಯ ವತಿಯಿಂದ ಪರ್ಕಳದಲ್ಲಿ ನಿಮಾರ್ಣಗೊಳ್ಳಲಿರುವ ಪರ್ಕಳ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಜುಲೈ 11ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಸದಸ್ಯರಾದ ಸುಮಿತ್ರಾ ನಾಯಕ, ಬಾಲಕೃಷ್ಣ ಶೆಟ್ಟಿ, ಮಂಜುನಾಥ ಮಣಿಪಾಲ, ವಿಜಯಲಕ್ಷ್ಮೀ, ಅಶ್ವಿನಿ, ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಹಸಿ ಮೀನು ಮಾರಾಟ ಮಹಿಳೆಯರ ಸಂಘದ ಅಧ್ಯೆ ಬೇಬಿ ಎಚ್​. ಸಾಲ್ಯಾನ್​, ಮುಖಂಡರಾದ ದಿಲೀಪರಾಜ್​ ಹೆಗ್ಡೆ, ದಿನೇಶ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಕಾಶ ಶೆಟ್ಟಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್​ ಹಾಗೂ ಮೀನು ಮಾರಾಟ ಮಹಿಳೆಯರು, ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net