

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ವಾರಾಹಿ ಯೋಜನೆಯಿಂದಲೂ ನಗರಕ್ಕೆ 25 ಎಂಎಲ್ಡಿ ನೀರು ಸರಬರಾಜಾಗುತ್ತಿದ್ದು, ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಬಜೆ ಡ್ಯಾಂಗೆ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರೊಂದಿಗೆ ಮೇ 15ರಂದು ಸಂಜೆ ಭೇಟಿ ನೀಡಿ, ನೀರಿನ ಸಂಗ್ರಹಮಟ್ಟ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಮಾತನಾಡಿದರು.
ಕಳೆದ ಒಂದು ತಿಂಗಳಿಂದ ಆಗಾಗ ಮಳೆಯಾಗುತ್ತಿರುವುದರಿಂದ ಡ್ಯಾಂನಲ್ಲಿ ಒಳಹರಿವು ಇದೆ. ನಗರವಾಸಿಗರಿಗೆ ನೀರು ಸರಬರಾಜಿಗೆ ತೊಂದರಯಾಗದು. ಹೀಗಾಗಿ ಈ ಬಾರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದು. ರೇಶನಿಂಗ್ ಮಾಡುವ ಅನಿವಾರ್ಯತೆ ಇಲ್ಲ ಎಂದರು.
ನಗರಸಭಾ ಪೌರಾಯುಕ್ತ ಮಹೇಶ, ನಗರಸಭಾ ಸದಸ್ಯರಾದ ಟಿ.ಜಿ. ಹೆಗ್ಡೆ, ಹರೀಶ ಶೆಟ್ಟಿ, ಗಿರಿಧರ ಆಚಾರ್ಯ, ಸಹಾಯಕ ಅಭಿಯಂತ ಚೇತನ, ವಾರಾಹಿ ಯೋಜನೆಯ ಅರ್ಕೇಶ ಗೌಡ ಇದ್ದರು.