

ವಿಜಯವಾಣಿ ಸುದ್ದಿಜಾಲ ಉಡುಪಿ
ಕೊಳ ವಾರ್ಡ್ನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಶ್ರೀರಾಮ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ನಗರಸಭೆಯ ಮೂಲಕ ಅನುದಾನ ಒದಗಿಸಲಾಗಿದೆ. ಅದರಂತೆಯೇ ನಗರಸಭಾ ವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆ ಸಮೀಪದ ಕೊಳ ವಾರ್ಡ್ನಲ್ಲಿ ನಗರಸಭೆಯ 25 ಲಕ್ಷ ರೂ. ಅನುದಾನದಲ್ಲಿ ನಿಮಾರ್ಣಗೊಳ್ಳಲಿರುವ ಶ್ರೀರಾಮ 1ನೇ ಅಡ್ಡ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಜುಲೈ 12ರಂದು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ವಾರ್ಡ್ ಸದಸ್ಯೆ ಎಡ್ಲಿನ್ ಕರ್ಕಡ, ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ, ಸ್ಥಳೀಯ ಪ್ರಮುಖರಾದ ಪಾಂಡುರಂಗ ಮಲ್ಪೆ, ಮಂಜು ಕೊಳ, ರವಿ ಸಾಲ್ಯಾನ್, ಯಶವಂತ, ಶರತ್, ಶಂಕರ ಸುವರ್ಣ, ದಿನೇಶ ಕೊಳ, ದೇವದಾಸ ಸುವರ್ಣ, ಸುಮಂತ ಕೊಳ ಇತರರು ಇದ್ದರು.