ಉಡುಪಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಮಹತ್ವದ ಜವಾಬ್ದಾರಿ ನಿಭಾಯಿಸಬೇಕಿದ್ದ ರಾಹುಲ್ ಗಾಂಧಿ, ಮತೀಯ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುತ್ವದ ವಿರುದ್ಧ ಮಾತನಾಡಿದ್ದಾರೆ. ಹಿಂದುಗಳ ತಾಳ್ಮೆ ಪರೀಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಉಡುಪಿ ಬಿಜೆಪಿ ಶಾಸಕ ಯಶ್ಪಾಪಾ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸನಾತನ ಧರ್ಮದ ಅವಹೇಳನ ಮಾಡುವ ಮೂಲಕ ತನ್ನ ನೈತಿಕ ಅಧಃಪತನ ಜಗಜ್ಜಾಹೀರು ಮಾಡಿದ್ದಾರೆ. ಹಿಂದು ಧರ್ಮಕ್ಕೆ ಪ್ರೀತಿ, ಸಹೋದರತೆಯ ಪಾಠ ಮಾಡುವ ಮೊದಲು ಅಂದು 5 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಹಿಂದುಗಳನ್ನು ಓಡಿಸಿದವರು ಯಾರು ಎಂದು ತಿಳಿಸಲಿ. ಅಮಾಯಕ ಕನ್ಹಯ್ಯಲಾಲ್ ಹತ್ಯೆ ಮಾಡಿದವರು ಯಾರೆಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ದಲಿತನ ಮನೆ ಹಾಗೂ ಪೊಲೀಸ್ ಠಾಣೆಣೆ ಬೆಂಕಿ ಇಟ್ಟವರು, ಪಿಎಫ್ಐನವರೊಂದಿಗೆ ಸೇರಿ ಭಯೋತ್ಪಾದನೆ ಮಾಡಿ ದೇಶದ್ರೋಹ ಮಾಡಿದವರು, ಉಡುಪಿ ಶಾಲೆಯಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತಂದವರು ಯಾರು ಎನ್ನುವುದನ್ನೂ ಸಹ ಲೋಕಸಭೆಯಲ್ಲಿ ಹೇಳುವ ಧೈರ್ಯ ರಾಹುಲ್ ಗಾಂಧಿ ಅವರಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದು ಧರ್ಮಕ್ಕೆ ಹಿಂಸೆಯ ಬಣ್ಣ ಬಳಿದು ಸನಾತನ ಧರ್ಮಕ್ಕೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ಈ ಹಿಂದೆ 49 ಸೀಟ್ ಗೆದ್ದಾಗ ಹಿಂದುತ್ವ ಕೆಟ್ಟದ್ದು, ಹಿಂದುಗಳು ಒಳ್ಳೆಯವರು ಎಂದಿದ್ದರು. ಈ ಬಾರಿ 99 ಸೀಟ್ ಗೆದ್ದ ಕೂಡಲೇ ಈಗ ಹಿಂದುಗಳೇ ಹಿಂಸೆ ಮಾಡುವವರು ಎಂದು ಹೇಳುವ ಮೂಲಕ ತನ್ನ ಹಿಂದು ವಿರೋಧಿ ನಿಲುವನ್ನು ಲೋಕಸಭೆಯಲ್ಲೇ ಬಹಿರಂಗ ಮಾಡಿದ್ದಾರೆ. ಜಾಗೃತ ಹಿಂದು ಸಮಾಜ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡುವ ಅನಿವಾರ್ಯತೆ ಇದೆ ಎಂದು ಯಶ್ಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ಹಿಂದು ವಿರೋಧಿ ಮನಸ್ಥಿತಿಯನ್ನು ಮಗದೊಮ್ಮೆ ಬಯಲುಗೊಳಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಹಿಂದು ವೇಷಧಾರಿಯಾಗಿ ದೇವಸ್ಥಾನಗಳನ್ನು ಸುತ್ತುವ, ತನ್ನ ಅಪ್ರಬುದ್ಧ ಮಾತುಗಳಿಂದ ಕಪಟತನ ಪ್ರದರ್ಶಿಸುವ ನಕಲಿ ಗಾಂಧಿ ಕುಟುಂಬದ ಕುಡಿ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ. ಸಮಾಜದ ಇತರ ಯಾರನ್ನೂ ದೂಷಿಸದೆ ಕೇವಲ ಹಿಂದುಗಳನ್ನು ಮಾತ್ರ ಅವಮಾನಿಸಿರುವುದು ಕಾಂಗ್ರೆಸ್ನ ಕೀಳು ಸಂಸತಿ ಬಿಂಬಿಸಿದ್ದಾರೆ. ಕಿಶೋರಕುಮಾರ್ ಕುಂದಾಪುರ. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ