29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

Anitha
Published on

ಮೈಸೂರು: ರಾಜ್ಯದ ಮಾಜಿ ಸಚಿವ ಹಾಗೂ ಹಾಲಿ ಮೈಸೂರಿನ ಕೆ.ಆರ್​.ನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಾ.ರಾ. ಮಹೇಶ್ ಅವರ ಪತ್ನಿ 29 ವರ್ಷಗಳ ಬಳಿಕ ಪದವಿಪೂರ್ವ ಪರೀಕ್ಷೆ ಬರೆದಿದ್ದು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಸಾ.ರಾ. ಮಹೇಶ್ ಪತ್ನಿ ಅನಿತಾ ಈ ಸಲದ ಪಿಯು ಪರೀಕ್ಷೆಯಲ್ಲಿ 600ಕ್ಕೆ 418 ಅಂಕ ಗಳಿಸುವ ಮೂಲಕ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು.

ಅನಿತಾ 1993ರಲ್ಲಿ ಎಸ್ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಬಳಿಕ ಅವರ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಇದೀಗ 29 ವರ್ಷಗಳ ಬಳಿಕ ಅವರು ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದಿದ್ದಾರೆ.

ಸಾ.ರಾ.ಮಹೇಶ್ ಹಿರಿಯ ಪುತ್ರ ಧನುಷ್ ಎಂಬಿಬಿಎಸ್‌ ಬಳಿಕ ಇದೀಗ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಎಂಎಸ್‌, ಎಂಡಿ ವ್ಯಾಸಂಗ ಮಾಡಿರುತ್ತಾರೆ. ಕಿರಿಯ ಪುತ್ರ ಜಯಂತ್ ಉದ್ಯಮಿಯಾಗಿದ್ದು, ತಂದೆಯ ಜೊತೆಗೆ ರಾಜಕೀಯವಾಗಿಯೂ ತೊಡಗಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net