ಮೀನುಗಾರ ಕುಟುಂಬಕ್ಕೆ ಧನಸಹಾಯ ಮಾಡಿ ಸಂತೈಸಿದ ಶಾಸಕ

GKN DINAKAR SHETTY
Published on

ಗೋಕರ್ಣ: ಕಳೆದ ವಾರ ಮೀನುಗಾರಿಕೆಗೆ ತೆರಳಿ ಸಾವಿಗೀಡಾದ ಮಂಜುನಾಥ ಅಂಬಿಗ ಕುಟುಂಬಕ್ಕೆ ಶನಿವಾರ ಭೇಟಿಯಿತ್ತ ಶಾಸಕ ದಿನಕರ ಶೆಟ್ಟಿ, ಮೀನುಗಾರನ ಪತ್ನಿ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ನೀಡಿ ವೈಯಕ್ತಿಯ ಧನ ಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕರು, ಮೀನುಗಾರಿಕೆ ಸಮಯದಲ್ಲಿ ಆಕಸ್ಮಿಕವಾಗಿ ಮರಣವನ್ನಪ್ಪಿದ ಮೀನುಗಾರ ಮಂಜುನಾಥ ಬಿಗ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಗರಿಷ್ಠ ಪರಿಹಾರ ಸಿಗುವಂತೆ ಮಾಡುತ್ತೇನೆ. ಇದರ ಜತೆಗೆ ಸಾಧ್ಯವಾದ ಇನ್ನಿತರ ಅಗತ್ಯ ಸಹಾಯವನ್ನು ಒದಗಿಸುವ ಭರವಸೆಯಿತ್ತರು.

ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷೆ ಧನಶ್ರೀ ಅಂಕೋಲೆಕರ, ಹತ್ತಿರದ ಇತರ ಗ್ರಾಪಂ ಅಧ್ಯಕ್ಷರಾದ ಆನಂದ ಕವರಿ, ಭಾರತಿ ಗೌಡ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಮಹೇಶ ನಾಯಕ, ರಮೇಶ ಪ್ರಸಾದ, ಜಗದೀಶ ಅಂಬಿಗ, ಪ್ರಭಾಕರ ಪ್ರಸಾದ, ಈಶ್ವರ ಗೌಡ, ಗಣೇಶ ಪಂಡಿತ, ನಾಗರಾಜ ತಾಂಡೇಲ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net