ಜೆಡಿಎಸ್ ಮುಖಂಡನ ಹೇಳಿಕೆಗೆ ಶಾಸಕ ಎಚ್ಚರಿಕೆ

Ravishankar-Copy
Published on

ಮೈಸೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಿಡ್ನಾೃಪ್ ಪ್ರಕರಣದಲ್ಲಿ ಕೆ.ಆರ್.ನಗರ ಶಾಸಕನ ಕೈವಾಡವಿದೆ ಎಂದು ಆರೋಪಿಸಿದ್ದ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಹೇಳಿಕೆಗೆ ಶಾಸಕ ಡಿ.ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನನಗೂ ಕಿಕಿಡ್ನಾೃಪ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಆ ದಿನ ಕೆ.ಆರ್.ನಗರದಲ್ಲೇ ಇರಲಿಲ್ಲ. ಆದರೂ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿ ಅಪಾದಿಸುತ್ತಿದ್ದಾರೆ.

ನನಗೆ ಸಂತ್ರಸ್ತೆ ಆಗಲಿ, ಅವರ ಮಗ ಆಗಲಿ ಸಂಪರ್ಕದಲ್ಲೇ ಇಲ್ಲ. ನಾನು ದೂರವಾಣಿ ಹಾಗೂ ನೇರವಾಗಿ ಎಂದೂ ಭೇಟಿಯಾಗಿಲ್ಲ. ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net