

ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 52ರ ವಿವಿಧ ಬಡಾವಣೆಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಮುಕುಂದನಗರ ಉದ್ಯಾನವನ, ಲಕ್ಷ್ಮಿ ಪಾರ್ಕ್ ಉದ್ಯಾನವನ, ಸನ್ಮಾನ ಕಾಲನಿ, ಮಯೂರಿ ಗಾರ್ಡನ್, ವೆಂಕಟೇಶ್ವರನಗರ, ವಾಸವಿ ಮಹಲ್ ಗಾರ್ಡನ್, ಗುಡಿಪ್ಲಾಟ್, ಕೋಟಿಲಿಂಗೇಶ್ವರನಗರ ಹಾಗೂ ಪ್ರಶಾಂತನಗರಗಳಿಗೆ ಭೇಟಿ ನೀಡಿದರು.
ರಸ್ತೆಗಳು, ನೀರಿನ ಸಮಸ್ಯೆ, ಕಸ ವಿಲೇವಾರಿ ಮತ್ತು ರಾಜಕಾಲುವೆಗಳ ಸಮಸ್ಯೆಗಳ ಕುರಿತು ಸ್ಥಳಿಯರು ಗಮನ ಸೆಳೆದರು.
ಸಮಸ್ಯೆ ಆಲಿಸಿದ ಶಾಸಕರು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ, ಉಮೇಶ ದುಶಿ, ಹರೀಶ ಜಂಗ್ಲಿ, ಕಿಶನ್ ಬಿಲಾನ, ನಾಗರಾಜ ಕುಲಕಣಿರ್, ಭಾಸ್ಕರ ಪೂಜಾರಿ, ಮಹಿಳೆಯರು ನಾಗರಿಕರು ಉಪಸ್ಥಿರಿದ್ದರು.