ಮಹೇಶ, ಪರಮೇಶ ಕುಟುಂಬದವರಿಗೆ ಪರಿಹಾರ ವಿತರಣೆ

26 kmdoddi mla
Published on

ಕೆ.ಎಂ.ದೊಡ್ಡಿ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಕದಲೂರು ಉದಯ ಸಲಹೆ ನೀಡಿದರು.

ಸಮೀಪದ ಎಸ್.ಐ. ಹೊನ್ನಲಗೆರೆ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹೇಶ ಹಾಗೂ ಪರಮೇಶ ಅವರ ನಿವಾಸಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ವಯಕ್ತಿಕ ಪರಿಹಾರ ವಿತರಿಸಿ ಅವರು ಮಾತನಾಡಿದರು. ಹೆಲ್ಮೆಟ್ ಧರಿಸಬೇಕು ಎಂಬುದು ನಿಯಮ. ಇದರಿಂದ ಜೀವ ರಕ್ಷಣೆ ಸಾಧ್ಯ. ಅನಾಹುತ, ಅಪಘಾತ ತಡೆಗೆ ಇದು ಸಹಕಾರಿ. ನಿರ್ಲಕ್ಷೃ ಮಾಡಿದರೆ ಕುಟುಂಬಸ್ಥರನ್ನು ಸಂಕಷ್ಟಕ್ಕೆ ದೂಡುವಂತಾಗುತ್ತದೆ ಎಂದು ಅವರು ತಿಳಿಸಿದರು.ವಾಹನ ಚಲಾಯಿಸಿಕೊಂಡು ಮನೆಯಿಂದ ಹೊರಗೆ ಹೋದವರನ್ನು ಕುಟುಂಬಸ್ಥರು ಕಾಯುತ್ತ ಇರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸವಾರರು ಸಂಚಾರ ನಿಯಮ ಪಾಲಿಸಲು ಗಮನ ನೀಡಬೇಕು. ಅತಿವೇಗದಲ್ಲಿ ವಾಹನ ಚಲಾವಣೆ ಬೇಡ. ಇದು ಅಪಘಾತಕ್ಕೆ ಕಾರಣವಾದರೆ ಕುಟುಂಬಗಳು ಸಂಕಟ, ನೋವು, ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ಬರುತ್ತದೆ ಎಂದು ಅವರು ಹೇಳಿದರು.

ವಾಹನ ಸವಾರರು ವಿಮೆ, ವಾಹನ ದಾಖಲೆಗಳನ್ನು ಸರಿಯಾಗಿ ಇರಿಸಿಕೊಳ್ಳಬೇಕು. ರಸ್ತೆಯಲ್ಲಿ ಎಚ್ಚರ ವಹಿಸಿ ವಾಹನ ಚಲಾಯಿಸಬೇಕು ಎಂದರು. ಜಿಪಂ ಮಾಜಿ ಸದಸ್ಯ ರಾಜೀವ, ಮುಖಂಡರಾದ ತಿಮ್ಮೇಗೌಡ, ಯಶ್ವಂತ, ಇಂದ್ರಕುಮಾರ್, ನಂದೀಶ್, ಅಣ್ಣೇಸ್ವಾಮಿ, ನವೀನ್ ಕುಮಾರ, ಮರಿಸ್ವಾಮಿ, ಶಿವಲಿಂಗು, ಸಿದ್ದರಾಜು, ವಿಶ್ವನಾಥ, ಮಲ್ಲೇಶ್, ಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net