ಶಾಸಕರಿಂದ ಕೆಎಂಸಿಆರ್ ಐ ಸೌಲಭ್ಯಗಳ ಚರ್ಚೆ

IMG_20250513_212731_596.jpg
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರೋಗ್ಯ ದೇವತೆ ಎಂದೇ ಪರಿಗಣಿಸಲಾಗಿರುವ ಇಲ್ಲಿಯ ಕೆಎಂಸಿಆರ್ ಐಗೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು ಅಗತ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕೆಎಂಸಿಆರ್ಐನ ವಿವಿಧ ವಿಭಾಗಗಳಿಗೆ ತೆರಳಿದ ಅವರು ಅಲ್ಲಿ ಆಗಬೇಕಾದ ಕೆಲಸಗಳು, ಒದಗಿಸಬೇಕಾದ ಸೌಲಭ್ಯಗಳ ಸಂಬಂಧ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹಾಗೂ ವಿವಿಧ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು.

ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ನರ್ಸ್ ಹಾಗೂ ವೈದ್ಯರ ನೇಮಕಾತಿ ಆಗದ ಹಿನ್ನಲೆಯಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ನೇಮಕಾತಿಗಳನ್ನು ಮಾಡಬೇಕಿದೆ. ಹಾಗೇ ಆಸ್ಪತ್ರೆಯಲ್ಲಿನ ಶಿಫ್ಟ ವೈಸ್ ಕೆಲಸಕ್ಕೆ 22 ಜನರು ಬೇಕಾಗಿದ್ದು, ಕೇವಲ 13 ಜನರು ಇದ್ದಾರೆ. ನರ್ಸಗಳ ಕೊರತೆ ನೀಗಬೇಕಾಗಿದೆ ಎಂದರು.

ರಾಜ್ಯ ಸರ್ಕಾರ ಕಾಯಂ ನೇಮಕಾತಿಗಳನ್ನು ಮಾಡಬೇಕಿದೆ. ಸ್ಟಾಫ್ ನರ್ಸ್, ಸಿನಿಯರ್ ವೈದ್ಯರನ್ನು ನೇಮಿಸಬೇಕು ಎಂದು ಶಾಸಕರು ಹೇಳಿದರು.

ಸ್ವರ್ಣ ಶಿಶು ಧಾಮವನ್ನು ಶಾಸಕರು ವೀಕ್ಷಿಸಿದರು. ಆಸ್ಪತ್ರೆಯಲ್ಲಿ 240 ಬೆಡ್ ವ್ಯವಸ್ಥೆ ಇದೆ. ಆದರೆ ಇನ್ನೂ 100ಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಆಗಬೇಕು ಎಂದರು. ಎಂಐಸಿಯು 2ನೇ ವಿಭಾಗಕ್ಕೆ ಭೇಟಿ ನೀಡಿದರು.

ಡಯಾಲಿಸಿಸ್ ನೂತನ ಕಟ್ಟಡದಲ್ಲಿ ಪ್ರಪೋಸ್ ಪ್ಲಾನ್ ನಲ್ಲಿ ಎರಡು ಲಿಪ್ಟ್ ಗಳನ್ನು ತೋರಿಸಲಾಗಿದೆ. ಆದರೆ, ಇಲ್ಲಿ ಡಯಾಲಿಸಿಸ್ ರೋಗಿಗಳು ಎಷ್ಟು ಹೊತ್ತು ನಿಲ್ಲಬೇಕು? ಹೊರರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುವುದರಿಂದ ಹೊಸ ಕಟ್ಟಡಕ್ಕೆ ನಾಲ್ಕು ಲಿಫ್ಟಗಳನ್ನು ಸೇರಿಸುವಂತೆ ಶಾಸಕರು ಸೂಚನೆ ನೀಡಿದರು.

ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ರೋಗಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು. ದೂರುಗಳು ಬರದಂತೆ ಕೆಲಸ ನಿರ್ವಹಿಸಿ ಎಂದು ಶಾಸಕರು ಸೂಚಿಸಿದರು.

ಡಾ. ರಾಜಶೇಖರ ದ್ಯಾಬೇರಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಬಿಜೆಪಿ ಮುಖಂಡ ರವಿ ನಾಯಕ, ಶಶಿ ಡಂಗನವರ, ಅನುಪ ವಂಟಿಮುರಿ, ಡಾ. ಹಸಬಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net