ರಾಂಪುರ ಜಲಾಶಯಕ್ಕೆ ಶಾಸಕ ಭೇಟಿ

15-05-Shiva-1
ರಾಯಚೂರಿನ ಹೊರವಲಯದಲ್ಲಿರುವ ರಾಂಪುರ ಜಲಾಶಯಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಬುಧವಾರ ಭೇಟಿ ನೀಡಿ ಕೆರೆ ತುಂಬಿಸುತ್ತಿರುವುದನ್ನು ಪರಿಶೀಲನೆ ನಡೆಸಿದರು. ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್, ಆಂಜಿನೇಯ ಕಡಗೋಲ, ಈ.ಶಶಿರಾಜ, ಯು.ನರಸರೆಡ್ಡಿ ಇದ್ದರು.
Published on

ರಾಯಚೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಂಪುರ ಜಲಾಶಯಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಬುಧವಾರ ಭೇಟಿ ನೀಡಿ ಗಣೇಕಲ್ ಜಲಾಶಯದಿಂದ ನೀರು ಹರಿಸುವ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜನರಿಗೆ ಸಮರ್ಪಕ ನೀರು ಒದಗಿಸುವ ನಿಟ್ಟಿನಲ್ಲಿ ಗಣೇಕಲ್ ಜಲಾಶಯದಿಂದ ರಾಂಪುರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಜನರು ನೀರನ್ನು ನೇರವಾಗಿ ಸೇವಿಸದೆ ಕುದಿಸಿ, ಆರಿಸಿ ಕುಡಿಯುವಬೇಕು.
ನಗರಸಭೆ ಅಕಾರಿಗಳು ನೀರನ್ನು ಶುದ್ಧೀಕರಿಸಿ ಪೂರೈಕೆಗೆ ಹೆಚ್ಚಿನ ಗಮನ ಹರಿಸಬೇಕು. ಬರದಿಂದಾಗಿ ನೀರಿನ ಕೊರತೆಯಿದ್ದು, ಜನರು ಮಿತವಾಗಿ ನೀರು ಬಳಕೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್, ಆಂಜಿನೇಯ ಕಡಗೋಲ, ಈ.ಶಶಿರಾಜ, ಯು.ನರಸರೆಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net