ಶಾಸಕ ವಿನಯ ಕುಲಕರ್ಣಿಗೆ ಮತದಾನಕ್ಕೆ ಅವಕಾಶ

d8122ef5-8842-46d6-8878-874fba763fac
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಮತದಾನ ಮಾಡಲು ಹೈಕೋರ್ಟ್​ ಏಕಸದಸ್ಯ ಪೀಠ ಮಂಗಳವಾರ ಮಧ್ಯಾಹ್ನ ಅನುಮತಿ ನೀಡಿದೆ.
ಮತದಾನ ಮಾಡುವ ಹಿನ್ನೆಲೆಯಲ್ಲಿ ಧಾರವಾಡ ಪ್ರವೇಶಕೆ ್ಕಅನುಮತಿ ಕೋರಿ ವಿನಯ ಕುಲಕಣಿರ್ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಆದರೆ, ವಿಚಾರಣೆ ಹಂತದಲ್ಲಿರುವ ಹಲವಾರು ಪ್ರಕರಣಗಳಲ್ಲಿ ಮತದಾನದ ಹಕ್ಕು ನೀಡಿದ ಉದಾಹರಣೆಗಳಿವೆ. ಇದನ್ನು ಉದಾಹರಿಸಿ ವಿನಯ ಹೈಕೋರ್ಟ್​ಗೆ ಮರುಪರಿಶೀಲನೆ ಅಜಿರ್ ಸಲ್ಲಿಸಿದ್ದರು.
ಅವರ ಅಜಿರ್ ಪುರಸ್ಕರಿಸಿರುವ ನ್ಯಾಯಾಲಯ, ಮತದಾನಕ್ಕೆ ಅವಕಾಶ ನೀಡಿದೆ. ಮಂಗಳವಾರ ಸಂಜೆ ಶಿಗ್ಗಾವಿ, ಹುಬ್ಬಳ್ಳಿ ಮಾರ್ಗವಾಗಿ ಧಾರವಾಡದ ಶಾರದಾ ಹೈಸ್ಕೂಲ್​ನ ಮತಗಟ್ಟೆಗೆ ಆಗಮಿಸಲಿದ್ದಾರೆ. ವಿನಯ ಕುಲಕಣಿರ್ ಆಗಮನದ ಹಿನ್ನೆಲೆಯಲ್ಲಿ ಶಾರದಾ ಸ್ಕೂಲ್​ ಮತಗಟ್ಟೆ ಬಳಿ ನೂರಾರು ಜನರು ಸೇರುವ ಹಿನ್ನೆಲೆಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net