ಪಕ್ಷ ನಿಷ್ಠರಿಗೆ ಸ್ಥಾನಮಾನ ಖಚಿತ

BJP
Published on

ಯಾದಗಿರಿ: ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಿಷ್ಠೆಯಿಂದ ಕೆಲಸ ಮಾಡಿದ ಕಾರ್ಯಕರ್ತರು ನಿರಾಶರಾಗಬೇಡಿ. ಮುಂದಿನ ದಿನಗಳಲ್ಲಿ ಖಂಡಿತ ಅವರಿಗೂ ಸೂಕ್ತ ಸ್ಥಾನ ಮಾನ ಕೊಡಿಸಲು ಯತ್ನಿಸುತ್ತೇನೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಭರವಸೆ ನೀಡಿದರು.

ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಪಕ್ಷದ ನಗರ ಮಂಡಲ ಘಟಕದಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರ ದೊರೆತ ನಂತರ ನಗರದ ಅಭಿವೃದ್ಧಿ ಜತೆಗೆ ಬಿಜೆಪಿ ಸಂಘಟನೆ ಒತ್ತು ನೀಡಬೇಕು. ನಗರದಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ನಿಮ್ಮ ಜತೆಗೂಡಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಅಲ್ಲದೆ ಕೋವಿಡ್-19 ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದೆ. ಸಕರ್ಾರದ ಯೋಜನೆಗಳ ಮಾಹಿತಿ ಜನರ ಮನೆಬಾಗಿಲಿಗೆ ತಲುಪಿಸುವ ಜಿಮ್ಮೆದಾರಿ ಕಾರ್ಯಕರ್ತರದ್ದು ಎಂದು ಸಲಹೆ ನೀಡಿದರು.

ಪ್ರಾಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಸದಸ್ಯರಾದ ರುದ್ರಗೌಡ ಪಾಟೀಲ್, ಶಿವಕಾಂತಮ್ಮ ವಡ್ನಳ್ಳಿ, ಸುಭಾಷ ಮಾಳಿಕೇರಿ, ಮಂಜುನಾಥ ಜಡಿ, ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ ಅಂಬಿಗೇರ, ಖಂಡಪ್ಪ ದಾಸನ, ಶರಣು ಆಶನಾಳ, ಹಣಮಂತ ವಲ್ಯಾಪುರೆ, ನಗರಸಭಾ ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ್, ಸುರೇಶ ಮಡ್ಡಿ, ಮಾರುತಿ ಕಲಾಲ್, ಮರೆಪ್ಪ ವಡಗೇರಿ, ರವಿ ಬಾಪುರೆ, ಚಂದ್ರಕಾಂತ ಮಡ್ಡಿ, ಮಶೆಪ್ಪ, ಬಸವರಾಜ ನಾಯಕ್, ಸುನೀತಾ ಚವ್ಹಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net