ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಬದ್ಧ

MUDNAL
Published on

ಯಾದಗಿರಿ: ವಡಗೇರಾ ತಾಲೂಕಿನ ಸವರ್ಾಂಗೀಣ ಅಭಿವೃದ್ಧಿಗೆ ರಾಜ್ಯ ಸಕರ್ಾರ ಬದ್ಧವಾಗಿದೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

ಸೋಮವಾರ ವಡಗೇರಾ ತಾಲೂಕಿನ ಶಿವಪುರ-ಗೂಂಡ್ಲೂರ್ ಗ್ರಾಮದ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಲೋಕೊಪಯೋಗಿ ಇಲಾಖೆಯಡಿ 4.80 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜನರ ಬೇಡಿಕೆಯಂತೆ ಗೋನಾಳ ಗ್ರಾಮದ ಹತ್ತಿರ ಸೇತುವೆ ನಿಮರ್ಾಣಕ್ಕೆ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸಕರ್ಾರ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅಲ್ಲದೆ ಯಾದಗಿರಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ನಾನು ಕೊಟ್ಟ ಭರವಸೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ವಡಗೇರಾ ನೂತನ ತಾಲೂಕಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಹೆಚ್ಚಿನ ಸೌಲಭ್ಯಗಳು ಬೇಕಿವೆ. ಹೊಸ ತಾಲೂಕನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ದೇಶದೆಲ್ಲಡೆ ಸಧ್ಯ ಕರೊನಾ ವೈರಸ್ ಹೆಮ್ಮಾರಿಯ ಕಿರಿಕಿರಿ ಹೆಚ್ಚಾಗುತ್ತಿರುವುದರಿಂದ ಸಕರ್ಾರ ಮೊದಲು ಜನರ ಜೀವ ಉಳಿಸುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಖಚರ್ು ಮಾಡುತ್ತಿದೆ. ಹೀಗಾಗಿ ಈ ವರ್ಷ ಶಾಸಕರಿಗೆ ನಿರೀಕ್ಷೆಯಂತೆ ಅನುದಾನ ಸಿಗುವುದಿಲ್ಲ. ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬರುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚನ್ನೂರ್, ಸಿದ್ದಣಗೌಡ ಕಾಡಂನೋರ್, ಶಂಕ್ರೆಪ್ಪಗೌಡ ಗೋನಾಲ್, ಸಿದ್ದಪ್ಪಗೌಡ ಕಾಳೆಬೆಳಗುಂದಿ, ಶಿವರಾಜಪ್ಪಗೌಡ ಬೆಂಡೆಬೆಂಬಳಿ, ಈರಣ್ಣ ತಳಬಿಡಿ, ಭೀಮಣ್ಣಗೌಡ ತುಮಕೂರ್, ರಾಜಶೇಖರ ಕಾಡಂನೋರ್, ಸಹಾಯಕ ಇಂಜನೀಯರ್ ವೈ.ಬಿ. ಚವ್ಹಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net