ಹಿಂದೂಗಳ ಪಾಲಿಗೆ ಭಯಭೀತ ವಾತಾವರಣ : ಶಾಸಕ ವೇದವ್ಯಾಸ ಕಾಮತ್ ಟೀಕೆ

allwyn_130820_kamath
Published on



ಮಂಗಳೂರು : ವೋಟ್ ಬ್ಯಾಂಕ್ ರಾಜಕಾರಣದ ನೀಚ ಮಟ್ಟಕ್ಕೆ ಇಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಪ್ರಮುಖರನ್ನು ಟಾರ್ಗೆಟ್ ಮಾಡುವ ಮೂಲಕ ಕರಾವಳಿಯ ಸಾಮಾಜಿಕ ಸ್ವಾಸ್ಥೃವನ್ನು ಇನ್ನಷ್ಟು ಹಾಳು ಮಾಡಲು ಹೊರಟಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಪ್ರಕರಣ ದಾಖಲಿಸಿರುವುದು,ಅರುಣ್ ಕುಮಾರ್ ಪುತ್ತಿಲ ಸಹಿತ ಹಿಂದೂ
ನಾಯಕರ ಗಡಿಪಾರಿಗೆ ನೊಟೀಸ್ ನೀಡಿರುವುದು ಸೇರಿದಂತೆ ಜಿಲ್ಲೆಯಲ್ಲಿ ಹಿಂದೂಗಳ ಪಾಲಿಗೆ ಭಯಭೀತ ವಾತಾವರಣ ಸೃಷ್ಟಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡುತ್ತಿರುವ ಕಾಂಗ್ರೆಸ್ ಸರ್ಕಾರ, ಹಿಂದೂಗಳ ವಿರುದ್ಧ ದಾಳಿ ಮಾಡುವ, ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಎಷ್ಟು ಮತಾಂಧ ಜಿಹಾದಿಗಳನ್ನು ಬಂಧಿಸಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಅವರು ಹೇಳಿದ್ದಾರೆ.
ಸರ್ಕಾರವು ಇಂತಹ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸ್ಥಾಪಿಸಬೇಕು .ಅದರ ಬದಲು ಇನ್ನಷ್ಟು ಪ್ರಕ್ಷುಬ್ಧತೆ ಸೃಷ್ಟಿಸಿದರೆ ಜನರ ತಾಳ್ಮೆಯ ಕಟ್ಟೆಯೊಡೆದು ಮುಂದಾಗುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ಹೊಣೆಯಾಗಬೇಕಾದೀತು ಎಂದು ಶಾಸಕ ಕಾಮತ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net