ಡಾ. ಅರುಣ್ ಉಳ್ಳಾಲ ಮೇಲಿನ ಪ್ರಕರಣ ಹಿಂಪಡೆಯಲು ಶಾಸಕ ಕಾಮತ್ ಆಗ್ರಹ

allwyn_130820_kamath
Published on

ಮಂಗಳೂರು : ಹಿಂದುಗಳನ್ನು ಗುರಿಯಾಗಿಸಿಕೊಂಡು ಕೇಸು ದಾಖಲಿಸಿ ಬೆದರಿಸುವುದನ್ನು ಬಿಜೆಪಿ ಸಹಿಸುವುದಿಲ್ಲ. ಪ್ರಾಧ್ಯಾಪಕ
ಡಾ. ಅರುಣ್ ಉಳ್ಳಾಲ ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕೆಂದು ಶಾಸಕ ಡಿ.ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ ಅವರ ಮೇಲೆ ದ್ವೇಷ ಭಾಷಣ, ಕೋಮು ಪ್ರಚೋದನೆ ಆರೋಪ ಹೊರಿಸಿ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಸರ್ಕಾರವನ್ನು ತೃಪ್ತಿಪಡಿಸಲು ಹೊರಟಿದೆ. ಹಿಂದುಗಳು ವಿದ್ಯಾರ್ಜನೆಗೆ ಹಿಂದು ವಿದ್ಯಾಸಂಸ್ಥೆಗಳನ್ನು, ಮದುವೆಯಂತಹ ಶುಭ ಸಮಾರಂಭಗಳಿಗೆ ಹಿಂದು ಕಲ್ಯಾಣ ಮಂಟಪಗಳನ್ನು ಬಳಸಬೇಕು ಎನ್ನುವುದು ಯಾವ ರೀತಿಯಲ್ಲಿ ದ್ವೇಷ ಭಾಷಣ? ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದು ದ್ವೇಷ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದವರು ಈಗ ತೋರಿರುವ ಉತ್ಸಾಹವನ್ನು ಗಮನಿಸಿದಾಗ ಇದರ ಹಿಂದೆ ಹಿಂದು ಪರ ಧ್ವನಿಯನ್ನು ಹತ್ತಿಕ್ಕುವ ಕಾಂಗ್ರೆಸ್ ಸರ್ಕಾರದ ಛಾಯೆ ಇರುವುದು ಸ್ಪಷ್ಟವಾಗಿದೆ ಎಂದು ಶಾಸಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net