

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಪರವಾಗಿ ಅಕ್ರಮ ನಡೆದಿರುವುದು ದಾಖಲೆಗಳ ಸಮೇತ ಕಣ್ಣಿಗೆ ರಾಚುತ್ತಿದ್ದರೂ ನಾನ್ಯಾಕೆ ರಾಜೀನಾಮೆ ಕೊಡಲಿ? ಎಂದು ಭಂಡತನ ಪ್ರದರ್ಶಿಸಿದ್ದರು. ಈಗ ನ್ಯಾಯಪೀಠವೇ ಸಿದ್ದರಾಮಯ್ಯನವರ ಅರ್ಜಿಯನ್ನು ತಿರಸ್ಕರಿಸಿದೆ. ಇನ್ನಾದರೂ ಭಂಡತನವನ್ನು ಬಿಟ್ಟು ನ್ಯಾಯಾಲಯದ ತೀರ್ಪಿಗೆ ತಲೆ ಬಾಗಬೇಕು. ತನಿಖೆಗೆ ಸಹಕರಿಸಲು ಹಾಗೂ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಉಳಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಒಂದೊಂದು ಹಗರಣಗಳಿಗೂ ನ್ಯಾಯಾಲಯದಿಂದ ಇಂತಹದೇ ತೀರ್ಪು ಬಂದಲ್ಲಿ ಇಡೀ ಸಚಿವ ಸಂಪುಟವೇ ರಾಜೀನಾಮೆ ನೀಡುವ ಸ್ಥಿತಿ ನಿರ್ಮಾಣವಾಗಲಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ತೊಲಗುವುದು ಖಚಿತ ಎಂದು ಶಾಸಕರು ಹೇಳಿದ್ದಾರೆ.