

ಮಂಗಳೂರು : ಬಜಾಲ್ ಪರಿಸರದಲ್ಲಿ ಗೋಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು ಗೋಕಳ್ಳರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಹಿಂದು ಧರ್ಮದಲ್ಲಿ ಗೋವಿಗೆ ಮಹತ್ತರ ಸ್ಥಾನವಿದೆ. ಗೋವಿನಿಂದಲೇ ಬದುಕು ಸಾಗಿಸುವ ಅನೇಕ ಕುಟುಂಬಗಳಿವೆ. ರಾಜ್ಯ ಸರ್ಕಾರ ಗೋಹತ್ಯೆ ಪ್ರತಿಬಂಧಕ ಜಾರಿಗೊಳಿಸಿದ್ದು ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ ಎಂದರು.
ಬಜಾಲ್ ಕಾನಕರಿಯ ನಿವಾಸಿ ಅಶ್ವಿನ್ ಎಂಬುವರ ಮನೆಯ ಹಟ್ಟಿಯಿಂದ ಗೋಕಳ್ಳತನವಾಗಿದ್ದು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಕಳ್ಳತನ, ಗೋಹತ್ಯೆಯ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶಾಸಕರು ಸೂಚಿಸಿದರು.
ಕಂಕನಾಡಿ ಠಾಣಾಧಿಕಾರಿ ಸಿದ್ದಣ್ಣ ಗೌಡ ಭಜಂತ್ರಿ, ಹಿಂದು ಸಂಘಟನೆಗಳ ಮುಖಂಡರಾದ ಕಿರಣ್ ರೈ ಬಜಾಲ್, ಉಮೇಶ್ ಜಪ್ಪಿನಮೊಗರು, ಪ್ರದೀಪ್ ಪಂಪ್‌ವೆಲ್, ಪದ್ಮನಾಭ ನಾವೂರು ಉಪಸ್ಥಿತರಿದ್ದರು.